ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಜನ ಮನ (PMJM) ಕಾರ್ಯಕ್ರಮದ ಅಡಿಯಲ್ಲಿ ಬರುವ ಭಾರತದ ಆದಿವಾಸಿ ಜನರಿಗೆ ಮೂಲ ಸೌಕರ್ಯವನ್ನು ಕಲ್ಪಿಸುವ ವತಿಯಿಂದ ಕಡಬ ತಾಲೂಕಿನ ಆಲಂಕಾರು -ಪೆರಾಬೆ ರಸ್ತೆ ಕಾಮಗಾರಿ ಉದ್ಘಾಟಿಸುವ ಸಂಧರ್ಭದಲ್ಲಿ ತಾನು ಮಾಡಬೇಕಾದ ದೀಪೋಜ್ವಲನೆಯನ್ನು ಕೊರಗ ಸಮುದಾಯಕ್ಕೆ ಸೇರಿದ ಹಿರಿಯ ಜೀವದಿಂದ ಮಾಡಿಸಿ ಆ ಸಮುದಾಯದಿಂದಲೇ ಈ ಅನುದಾನ ಬಂದಿರುತ್ತದೆ ಆದುದರಿಂದ ಈ ಸಮುದಾಯದ ಅಭಿವೃದ್ಧಿಯಲ್ಲಿ ಇಲ್ಲಿನ ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು ಎಂದು ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿನಂತಿಸಿದರು.
2024ರಿಂದ ಪ್ರಧಾನಮಂತ್ರಿಗಳ ಆಶಯದಂತೆ ದೇಶಾದ್ಯಂತ ಅತೀ ಹಿಂದುಳಿದ 18 ಸಮುದಾಯಗಳನ್ನು ಗುರುತಿಸಿ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ಸಲುವಾಗಿ ಪ್ರಧಾನಮಂತ್ರಿ ಜನ ಮನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಒಟ್ಟು 24 ಸಾವಿರ ಕೋಟಿ ಹಣವನ್ನು ಮೀಸಲು ಇಟ್ಟಿದ್ದಾರೆ.
ಕರ್ನಾಟಕದ ಜೇನು ಕುರುಬ ಮತ್ತು ಕೊರಗ ಸಮುದಾಯವನ್ನು ಆಯ್ಕೆಮಾಡಿದ್ದಾರೆ. ನಮ್ಮ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮುತುವರ್ಜಿ ವಹಿಸಿ ದಕ್ಷಿಣ ಕನ್ನಡ ಜಿಲ್ಲೆಗೆ 10.50 ಕೋಟಿ ರೂಪಾಯಿಗಳನ್ನು ಅನುದಾನ ತಂದಿದ್ದಾರೆ ಅದರಲ್ಲಿ 2.5 ಕಿಲೋಮೀಟರು ಉದ್ದದ ಕಡಬ ತಾಲೂಕಿನ ಆಲಂಕಾರು-ಪೆರಾಬೆ ರಸ್ತೆಗೆ 2.75 ಕೋಟಿ ಅನುದಾನವನ್ನು ಒದಗಿಸಿ ಕೊಟ್ಟಿರುತ್ತಾರೆ.
Post a Comment