ದೇವರಿಗೆ ಬಡಿದ ಡೋನ್ - ವಿಟ್ಲ ಜಾತ್ರೆಯ ರಥೋತ್ಸವದಲ್ಲಿ ಸಂಭವಿಸಿದ ಅಚಾತುರ್ಯ

 




ಚಿತ್ರಿಕರಣಕ್ಕೆ ಬಳಸಿದ ಡ್ರನ್ ದೇವರ ಉತ್ಸವ ಮೂರ್ತಿ ಹಾಗೂ ಪಕ್ಕದಲ್ಲೆ ರಥದಲ್ಲಿ ನಿಂತಿದ್ದ ತಂತ್ರಿಗಳ ಸಹಾಯಕರಿಗೆ ಬಡಿದ ಘಟನೆ ನಡೆದಿದೆ. ಘಟನೆಯಲ್ಲಿ ತಂತ್ರಿಗಳ ಸಹಾಯಕರಿಗೆ ಗಾಯವಾಗಿದೆ.

ಏನಿದು ಘಟನೆ ?

ಜ 21 ರಂದು ಸಂಜೆ ದೇವಾಲಯದಲ್ಲಿ ಸುತ್ತು ಬಲಿ ನಡೆದ ಬಳಿಕ ಉತ್ಸವ ಮೂರ್ತಿಯನ್ನು ಬ್ರಹ್ಮವಾಹಕರು ರಥದ ಬಳಿಗೆ ತಂದಿದ್ದಾರೆ. ಬಳಿಕ ದೇವರನ್ನು ಹೊತ್ತು ರಥವನ್ನೇರಿದ್ದು, ಪೀಠದಲ್ಲಿ ಕೂರಿಸುವ ಮೊದಲು, ಗದ್ದೆಯಲ್ಲಿ ನೆರೆದಿದ್ದ ಭಕ್ತರ ಕಡೆಗೆ ತಿರುಗುತ್ತಿದ್ದಂತೆ, ಡೋನ್ ಒಂದು ದೇವರ ಕಡೆಗೆ ಹಾರಿ ಬಂದಿದೆ.

ಈ ಡೋನ್ ದೇವರ ಪುಷ್ಪಕನ್ನಡಿಯ ಬಲ ಭಾಗಕ್ಕೆ ಹೊಡೆದು, ಬ್ರಹ್ಮವಾಹಕರ ಜತೆಗಿದ್ದ ತಂತ್ರಿವರ್ಗದ ಸಹಾಯಕರ ತಲೆಗೆ ಹೊಡೆದಿದೆ. ಅದರ ರೆಕ್ಕೆಗಳ ಏಟಿಗೆ ತಲೆಗೆ ಗಾಯವಾಗಿದೆ. ರಥ ಏರುವ ಸ್ಥಳದಲ್ಲಿ ಬಿದ್ದ ಡೋನ್ ಅನ್ನು ಹೊರಗೆ ಎಸೆಯಲಾಗಿದೆ. ಸ್ಥಳೀಯರಿಗೆ ಸೇರಿದ ಡೋನ್ ಎಂದು ಹೇಳಲಾಗಿದೆ.

ಕಾದಿದೆಯೇ ಕಂಟಕ ? ಏನಿದು ಮನ್ಸೂಚನೆ ?

ಕಳೆದ ವರ್ಷ ದೀಪಾವಳಿಯ ಸಂದರ್ಭ ಉತ್ಸವ ಮೂರ್ತಿಗೆ ಬಿನ್ನವಾಗಿತ್ತು. ಕಳೆದ ಜಾತ್ರೆಯ ಸಂದರ್ಭ ದೇವರು ತಲೆಯಿಂದ ಬೀಳಲಾಗಿದ್ದು, ಕೆಲವು ವರ್ಷಗಳಿಂದ ವಿವಿಧ ರೀತಿಯ ಅವಘಡಗಳು ದೇವಸ್ಥಾನದಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ಅಂಗವಾಗಿ ತಿಂಗಳ ಹಿಂದೆ ನಡೆದ ಪ್ರಶ್ನಾ ಚಿಂತನೆಯ ಸಂದರ್ಭದಲ್ಲೂ ಮಾತಿನ ಚಕಮಕಿ ನಡೆದಿದೆ.

ದೇವರ ಉತ್ಸವದ ಪುಣ್ಯ ಪಾವನ ಸಂದರ್ಭವೇ ನಡೆದ ಈ ಅವಘಡ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಮೂಲಕ ದೇವರು ಏನಾದರೂ ಮುನ್ಸೂಚನೆ ನೀಡಲು ಯತ್ನಿಸಿದರೇ ಎಂಬ ಜಿಜ್ಞಾಸೆ ಭಕ್ತಾದಿಗಳ ಮನಸ್ಸಿನಲ್ಲಿ ಮೂಡಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ. ಕಳೆದ ಮೂರು ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಮೂರು ಇಂತಹುದೇ ಅಚಾತುರ್ಯದ ಘಟನೆಗಳು ನಡೆದಿದ್ದು, ವಿಟ್ಲಕ್ಕೆ ಕಂಟಕ ಕಾದಿದೇಯೇ ಎಂಬ ಬಗ್ಗೆಯೂ ಆತಂಕದ ಧ್ವನಿಗಳು ವಿಟ್ಲ ಸೀಮೆಯ ಭಕ್ತಾದಿಗಳ ಮನಸ್ಸಿನಲ್ಲಿ ಮೂಡಿದೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget