ಪ್ರಯಾಗ್ರಾಜ್: ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಊಟ ಬಡಿಸಲು ಅದಾನಿ ಗ್ರೂಪ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಕೈಜೋಡಿಸಿವೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಮಹಾ ಕುಂಭಮೇಳ ಪೂರ್ತಿ ಈ ಮಹಾಪ್ರಸಾದ ಸೇವೆಯನ್ನು ನೀಡಲಾಗುತ್ತದೆ. ಉಪಕ್ರಮಕ್ಕಾಗಿ ಇಸ್ಕಾನ್‌ಗೆ ಧನ್ಯವಾದ ಹೇಳಲು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ಇಸ್ಕಾನ್ ಆಡಳಿತ ಮಂಡಳಿ ಆಯೋಗದ (ಜಿಬಿಸಿ) ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿ ಮಾಡಿದರು. ಮಹಾಪ್ರಸಾದ ಸೇವೆಯನ್ನು ನೀಡುವಲ್ಲಿ ಇಸ್ಕಾನ್ ನೀಡುತ್ತಿರುವ ಬೆಂಬಲದ ಬಗ್ಗೆ ಮಾತನಾಡಿದ ಗೌತಮ್ ಅದಾನಿ, “ಮಹಾಕುಂಭ ಪವಿತ್ರವಾದ ಸೇವಾ ಸ್ಥಳವಾಗಿದ್ದು, ಅಲ್ಲಿ ಪ್ರತಿಯೊಬ್ಬ ಭಕ್ತರೂ ದೇವರಿಗೆ ಸೇವೆ ಸಲ್ಲಿಸಲು ತೊಡಗಿಸಿಕೊಳ್ಳುತ್ತಾರೆ. ಇಸ್ಕಾನ್ ಸಹಯೋಗದೊಂದಿಗೆ ಮಹಾಕುಂಭದಲ್ಲಿ ಭಕ್ತರಿಗಾಗಿ ನಾವು ‘ಮಹಾಪ್ರಸಾದ ಸೇವೆ’ಯನ್ನು ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ” ಎಂದಿದ್ದಾರೆ. "ಮಾತಾ ಅನ್ನಪೂರ್ಣೆಯ ಆಶೀರ್ವಾದದಿಂದ ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ಇಂದು ನನಗೆ ಇಸ್ಕಾನ್‌ನ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನಿಜವಾದ ಅರ್ಥದಲ್ಲಿ ಈ ಸೇವೆಯು ದೇಶಭಕ್ತಿಯ ಅತ್ಯುನ್ನತ ರೂಪವಾಗಿದೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು.” ಎಂದು ಗೌತಮ್ ಅದಾನಿ ಹೇಳಿದ್ದಾರೆ.
Post a Comment