ಬಿಗ್​ಬಾಸ್​ ಮನೆಗೆ ಭರ್ಜರಿ ಎಂಟ್ರಿ ಕೊಟ್ಟ ಧನರಾಜ್ ದೊಡ್ಡ ಕುಟುಂಬ

 


ಬೆಂಗಳೂರು: ಈ ವಾರದಿಂದ ಬಿಗ್ವಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿದೆ. ಸ್ಪರ್ಧಿಗಳ ಕುಟುಂಬ ಸದಸ್ಯರು ಬಿಗ್ ಬಾಸ್ ಮನೆಗೆ ಭೇಟಿ ನೀಡಿ ಅವರ ಜತೆ ಕಳೆಯುವ ಮಧುರ ಕ್ಷಣಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದೆ. ಇಂದಿನ ಸಂಚಿಕೆಯಲ್ಲಿ (ಜ.2) ಪುತ್ತೂರಿನ ಖ್ಯಾತ ಯೂಟ್ಯೂಬರ್, ತನ್ನ ನಗೆ ಬುಗ್ಗೆಯಿಂದ ಬಿಗ್ ಬಾಸ್ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಧನರಾಜ್ ((Dhanaraj) ರವರ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ.



ಈಗಾಗಲೇ ತ್ರಿವಿಕ್ರಮ್, ಭವ್ಯಾ, ರಜತ್. ಮಂಜು, ಗೌತಮಿ, ಮೋಕ್ಷಿತಾ ಅವರ ಕುಟುಂಬ ಬಿಗ್ವಾಸ್ ಮನೆಗೆ ಭೇಟಿ ನೀಡಿದೆ. ಅವರ ಕುಟುಂಬದ ಒಂದು ಅಥಾವ ಎರಡು ಸದಸ್ಯರು ಮನೆಯೊಳಗೆ ಭೇಟಿ ನೀಡಿದ್ರೆ. ಧನರಾಜ್ ಕುಟುಂಬದಿಂದ ಜಂಬೋ ತಂಡವೇ ಬಿಗ್ ಬಾಸ್‌ ಮನೆ ಪ್ರವೇಶಿಸಿದೆ. ಈ ಮೂಲಕ ದೊಸ್ಮನೆಗೆ ದೊಡ್ಡ ಕುಟುಂಬವೇ ಭೇಟಿ ನೀಡಿದಂತಾಗುತ್ತದೆ.

ಸುಮಾರು 25ಕ್ಕೂ ಹೆಚ್ಚು ಮಂದಿ ಬಸ್ಸು ಬುಕ್ ಮಾಡಿಕೊಂಡು ಮಂಗಳವಾರ ಪುತ್ತೂರಿನಿಂದ ಬೆಂಗಳೂರಿಗೆ ತೆರಳಿದ್ದು, ಬುಧವಾರ ಅಲ್ಲಿ ಶೂಟಿಂಗ್ ಮುಗಿಸಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಇಂದು ರಾತ್ರಿಯ ಸಂಚಿಕೆಯಲ್ಲಿ ಇದು ಪ್ರಸಾರವಾಗಲಿದ್ದು ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಇದರ ಪ್ರೊಮೋ ರಿಲೀಸ್ ಮಾಡಿದೆ.

ದೊಡ್ಡನೆಯ ಗಾರ್ಡನ್ ಏರಿಯಾದಲ್ಲಿ ಧನರಾಜ್ ಫ್ಯಾಮಿಲಿಯ ಸದಸ್ಯರು ಹುಲಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ನೋಡಿದ ಧನರಾಜ್ ಕೂಡ ಹುಲಿ ಡ್ಯಾನ್ಸ್‌ ಮಾಡಿದ್ದಾರೆ. ಈ ಒಂದು ಸಂತೋಷದಲ್ಲಿಯೇ ಪತ್ನಿ ಎಂಟ್ರಿ ಸಹ ಆಗುತ್ತದೆ. ಹಾಗೆ ಬಂದ ಪತ್ನಿ ಧನರಾಜ್ ಅಷ್ಟೇ ಪ್ರೀತಿಯಿಂದ ಹೊಡೆಯೊದನ್ನು ಪ್ರೋಮೊದಲ್ಲಿ ಕಾಣಬಹುದಾಗಿದೆ.

ಧನರಾಜ್ ಆಚಾರ್ಯರವರ ತಂದೆ ರಾಘವ ಆಚಾರ್ಯ. ತಾಯಿ ಸಂದ್ಯಾ ರಾಘವ, ಪತ್ನಿ ಪ್ರಜ್ಞಾ ಆಚಾರ್ಯ ಮತ್ತು ಮಗಳು, ಕುಟುಂಬ ಸದಸ್ಯರಾದ ಜಗದೀಶ್ (ಜಗ್ಗ ಚಿಕ್ಕ ), ಅನುಸೂಯ ಜಗದೀಶ್, ಯಶಸ್ಸು, ವಿಶಾಸ್ಸು, ಕೇಶವ ಆಚಾರ್ಯ, ಜಯಶ್ರೀ ಕೇಶವ, ವಾಸುದೇವ, ಅನಿತಾ ವಾಸುದೇವ, ದೇವಿಕಾ. ಪ್ರಿಯಾಂಕ( ಪಿಂಕಿ), ಪ್ರಸಾದ್. ಸುಷ್ಮಾ, ಸಂತೋಷ್, ಭವ್ಯಾ ಸಂತೋಷ್, ನಕ್ಷತ್ರ, ಪ್ರಶಾಂತ್, ಪೂಜಾ ಪ್ರಶಾಂತ್, ಅಭಿಷೇಕ್, ಕೃತಿಕಾ ಅಭಿಷೇಕ್ , ಪ್ರಸಾದ್ ಮತ್ತಿತ್ತರರು ಬಿಗ್ ಬಾಸ್ ಮನೆಗೆ ಪುತ್ತೂರಿನಿಂದ ಹೊರಟವರು.

ಧನರಾಜ್ ತನ್ನ ಕುಟುಂಬ ಸದಸ್ಯರೊಂದಿಗೆ ಮಾಡಿದ ಟಿಕ್ ಟಾಕ್ ವಿಡಿಯೋಗಳ ಮೂಲಕ ಪ್ರಸಿದ್ದಿಗೆ ಬಂದವರು . ಅವರ ಟಿಕ್ ಟಾಕ್ ಹಾಗೂ ಯೂಟ್ಯೂಬ್ ವಿಡಿಯೋ ಗಳನ್ನು ವೀಕ್ಷಿಸಿದ ಬಹುತೇಕ ವೀಕ್ಷಕರಿಗೆ ಅವರ ಈ ಕುಟುಂಬ ಸದಸ್ಯರ ಪರಿಚಯ ಇದ್ದೆ ಇರುತ್ತದೆ ಹಾಗೂ ಅವರು ಮಾಡುವ ಕಾಮಿಡಿಗಳಿಗೆ ಮನಸೋತವರೇ ಆಗಿದ್ದಾರೆ. ಹೀಗಾಗಿ ಹತ್ತಕ್ಕಿಂತ ಹೆಚ್ಚು ಮಂದಿಗೆ ಬಿಗ್ ಬಾಸ್ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಹಿನಿಯ ಮೂಲಗಳು ತಿಳಿಸಿವೆ.

ಕುಟುಂಬ, ಸಂಬಂಧ. ನಿಷ್ಕಲ್ಮಶ ಪ್ರೀತಿಗೆ ಬಿಗ್ ಬಾಸ್ ಮನೆ ಈ ವಾರ ಸಾಕ್ಷಿಯಾಗಿದೆ. ಸುಮಾರು 2 ತಿಂಗಳ ಬಳಿಕ ಧನರಾಜ್ ಅವರು ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತಿದ್ದಾರೆ. ಇದು ಅತ್ಯಂತ ಬಾವುಕ ಕ್ಷಣಗಳಿಗೂ ಸಾಕಿಯಾಗಿದೆ. ಜನಿಸಿದ ಒಂದು ತಿಂಗಳಿನಲ್ಲಿಯೇ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಧನರಾಜ್ ತೆರಳಿದ್ದು, ಇದೀಗ ಎರಡು ತಿಂಗಳ ಬಳಿಕ ಭೇಟಿಯಾಗುತ್ತಿದ್ದು ತೊಟ್ಟಿಲಲ್ಲಿ ಮಲಗಿದ ಮಗುವನ್ನು ನೋಡಿ ಧನರಜ್ ಸಕತ್ ಎಮೋಷನಲ್ ಆಗಿದ್ದಾರೆ. ನಿಜಕ್ಕೂ ಈ ಒಂದು ಕ್ಷಣ ತುಂಬಾನೆ ಹಾರ್ಟ್ ಟಚಿಂಗ್ ಆಗಿದೆ. ಪತ್ನಿ ಕೂಡ ಬಂದು ಧನರಾಜ್ರನ್ನ ಸಿಕ್ಕಾಪಟ್ಟೆ ಪ್ರೀತಿಯಿಂದ ಹೊಡೆದಿರೋದು ಮಜವಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget