ಹಿಂದು ಕುಟುಂಬಗಳ ರಕ್ಷಣೆಗೆ ಮುಂದಾಗಿ ಕುಟುಂಬಗಳು ಉಳಿದರೆ ಮಾತ್ರ ದೇಶ ಉಳಿಯುತ್ತೆ

 


ಬೆಂಗಳೂರು: ಮಕ್ಕಳಿಗೆ ಹಿಂದು ಜೀವನದ ಶ್ರೇಷ್ಠತೆ ಕಲಿಸದಿದ್ದರೆ ನಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ಹಿಂದು ಕುಟುಂಬಗಳ ರಕ್ಷಣೆಗೆ ಮುಂದಾಗಬೇಕು. ಕುಟುಂಬಗಳು ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥರ ಪಂಚಮ ಆರಾಧನೋತ್ಸವ ಪ್ರಯುಕ್ತ ಗುರುಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಮಾದಕವಸ್ತು ಸೇವಿಸುವ ಹಂಬಲ ಹೆಚ್ಚಾಗಿದೆ. ಕುಟುಂಬಗಳಲ್ಲಿ ಮಕ್ಕಳಿಗೆ ಜೀವನ ಮೌಲ್ಯ ಕಲಿಸುವುದು ಕಡಿಮೆಯಾಗುತ್ತಿದೆ. ಹಿಂದು ಮಕ್ಕಳಿಗೆ ಜೀವನದ ಶ್ರೇಷ್ಠತೆ ಕಲಿಸದಿದ್ದರೆ ನಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಭಾರತವಾಗಿ ಉಳಿಯ ಬೇಕಾದರೆ ಹಿಂದುಗಳ ಕುಟುಂಬ, ಹಿಂದು ಸಮಾಜವನ್ನು ಸರಿಯಾದದಾರಿಯಲ್ಲಿ ನಡೆಸಲು ಇಂತಹ ವಿದ್ಯಾಪೀಠದ ಆವಶ್ಯಕತೆ ಇದೆ ಎಂದು ಹೇಳಿದರು.



ಶ್ರೀವಿಶ್ವೇಶತೀರ್ಥರ ಆರಾಧನೋತ್ಸವವು ಶ್ರದ್ದೆ ಜೊತೆಗೆ ಧರ್ಮದ ಜಾಗರಣೆ, ಸಾಮಾಜಿಕ ಜಾಗೃತಿ ಮತ್ತು ಜನರ ಬದುಕು ಸಾರ್ಥಕ ಮತ್ತು ಸಫಲತೆ ಪಡೆಯಲು ಒಂದು ಮಾರ್ಗವಾಗಿದೆ. ಭವಿಷ್ಯದಲ್ಲಿ ಮಕ್ಕಳು ಶಾಸ್ತ್ರಗಳಲ್ಲಿ, ವೇದಗಳ ಅಧ್ಯಯನದಲ್ಲಿ ಪಾರಂಗತರಾಗಿ ಭಾರತದ ಸನಾತನ ಪರಂಪರೆಯನ್ನು ಸಮೃದ್ಧವಾಗಿ ಮುನ್ನಡೆಸಿಕೊಂಡುಹೋಗಬೇಕು ಎಂಬ ಉದ್ದೇಶದಿಂದ ಈ ಪರಿಸರದಲ್ಲಿ ವಿದ್ಯಾಪೀಠವನ್ನು ಶ್ರೀಗಳು ಪ್ರಾರಂಭಿಸಿದ್ದಾರೆ. ಇದನ್ನು ಮುನ್ನೆಡೆಸಲು ವಿದ್ವತ್ ಪರೀಕ್ಷೆಗಳು, ಶ್ರೀಮನ್ಯಾಯಸುಧಾ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಜ್ಞಾನ, ಶ್ರದ್ದೆಗೆ ಗೌರವ ನೀಡುವುದರಿಂದ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು. ಭಗವಂತನ ಸ್ಮರಣೆ ಮಾಡುವುದು ಪರಂಪರೆಯಿಂದ ಬಂದಿದೆ. ಧರ್ಮಕ್ಕಾಗಿ ಬುದುಕಬೇಕು. ಜ್ಞಾನದ ಪ್ರಸಾರಕ್ಕಾಗಿ ಜೀವನ ಸ್ಮರಿಸಬೇಕು. ಜ್ಞಾನವನ್ನು ಮುಂದಿನತಲೆಮಾರಿಗೆ ಕೊಡಲು ಶ್ರಮಿಸಬೇಕು ಎಂದರು.

ಸಂಘ ಜತೆ ವಿಶೇಷ ಬಂಧ

ಶ್ರೀವಿಶ್ವೇಶತೀರ್ಥ ಶ್ರೀಗಳು ಸಂಘದ ಕಾರ್ಯಕರ್ತರ ಜೊತೆಗೆ ಸೇರಿದ್ದರು. ಹಿಂದು ಸಮಾಜದ ಸಂಘಟನೆ, ದೇಶದ ಪರಂಪರೆ ಉಳಿಸಲು ಶ್ರಮಿಸುತ್ತಿದೆ. ಹಿಂದುತ್ವದ ಕಾರಣಕ್ಕಾಗಿ ಸಂಘದ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದರು. ಸಂಘದ ವಿಷಯಗಳ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಾ ಬೆಂಬಲವಾಗಿ ನಿಂತಿದ್ದರು. ಅಲ್ಲದೇ ಮಾತೃವಾತ್ಸಲ್ಯದಿಂದ ನಮ್ಮನ್ನು ಬೆಳೆಸಿದ್ದಾರೆ ಎಂದು ದತ್ತಾತ್ರೇಯ ಹೊಳಬಾಳೆ ಸ್ಮರಿಸಿದರು.


ಹಿಂದುಗಳ ರಕ್ಷಣೆಗೆ ಮುಂದಾಗಬೇಕು

1979-80ರಲ್ಲಿ ಹಿಂದು ಸೇವಾ ಪ್ರತಿಷ್ಠಾನ ಸ್ಥಾಪನೆ ಮಾಡಿದ್ದರು. ಅಜಿತ್ ಕುಮಾರ್ ಸಂಘದ ಪ್ರಚಾರ ಕಾರ್ಯವಹಿಸಿದ್ದರು. ಹಿಂದು ಸಮಾಜದ ಉನ್ನತಿಗೆ, ಪ್ರಗತಿಗೆ ಹಲವು ಕಾರ್ಯಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳಿಂದ ಹಿಂದು ಸಮಾಜದ ಸಂಘಟನೆ ಮಾಡುತ್ತಾ ಬಂದಿದೆ. ಅದನ್ನು ನಾವು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎಂದು ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget