ಸಂಸದ ಕ್ಯಾ.ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ

ನಿರೀಕ್ಷಣ ಮಂದಿರದಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಮನವಿ ಸ್ವೀಕಾರ

ಕೆಲವು ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸ್ಥಳದಿಂದಲೇ ಸೂಚನೆ




ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಜ. 24 ರಂದು ಸಾರ್ವಜನಿಕರಿಗೆ ಭೇಟಿಗೆ ಅವಕಾಶ ನೀಡಿ ಅವರಿಂದ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.


ಸಂಸದರು ಸಂಜೆ ಸುಮಾರು 4 ಗಂಟೆಗೆ ಸುಳ್ಯದ ಐ ಬಿ ಕಚೇರಿಗೆ ಬಂದರು. ಈ ವೇಳೆ ಕಚೇರಿ ಬಳಿ ನೂರಾರು ಮಂದಿ ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರುಗಳು ಜಮಾಯಿಸಿದ್ದರು. 


ಬಳಿಕ ಸಾರ್ವಜನಿಕರು ಸಂಸದರನ್ನು ಭೇಟಿ ಮಾಡಿ ತಮ್ಮ ತಮ್ಮ ಊರುಗಳ ಮೂಲಭೂತ ಸಮಸ್ಯೆಗಳ ಬಗ್ಗೆ ಮನವಿಯನ್ನು ನೀಡಿ ಸ್ಪಂದನೆಗಾಗಿ ಕೇಳಿಕ್ಕೊಂಡರು.


ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ನಿವೇಶನಕ್ಕಾಗಿ ಸಂಭಂದಪಟ್ಟ ಇಲಾಖೆಗೆ ನೀಡಿರುವ ಮನವಿಯ ಬಗ್ಗೆ ಹಾಗೂ ಅತಿ ಶೀಘ್ರದಲ್ಲಿ ಸ್ಪಂದನೆ ನೀಡುವಂತೆ ಸಂಸದರಲ್ಲಿ ಮನವಿ ಮಾಡಿಕ್ಕೊಂಡರು.


ಸುಳ್ಯ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ವೈಟ್ ಬೋರ್ಡ್ ವಾಹನಗಳು ಬಾಡಿಗೆ ಮಾಡುವ ಕಾರಣ ನಮಗೆ ಸಮಸ್ಯೆ ಆಗಿದೆ ಈ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳ ಬಳಿ ನಮ್ಮ ಅಹವಾಲನ್ನು ಹೇಳಿಕ್ಕೊಂಡರೆ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಆದರಿಂದ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕ್ಕೊಂಡರು.

ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದಿರೆ ರವರು ಮನವಿ ನೀಡಿ ಪುರಭವನ ಅಭಿವೃದ್ಧಿಗೆ ಅನುಧಾನ ಹಾಗೂ ಸುಳ್ಯ ವಾರ್ಡ್ ಗಳ ಅಭಿವೃದ್ಧಿಗೆ ಅನುಧಾನಕ್ಕಾಗಿ ಮನವಿ ಮಾಡಿದರು.

ಅರಂಬೂರು ಸರಕಾರಿ ಶಾಲಾ ವತಿಯಿಂದ ಮನವಿ ನೀಡಿದ ಸಮಿತಿಯವರು ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಎಂ ಆರ್ ಪಿ ಎಲ್ ಸಂಸ್ಥೆಗೆ ಶಿಪಾರಸ್ಸು ಪತ್ರ ನೀಡುವ ಬಗ್ಗೆ ಕೇಳಿಕ್ಕೊಂಡರು.


ಗಾಂಧಿನಗರ ಕೆ ಪಿ ಎಸ್ ಪ್ರೌಢ ಶಾಲಾ ವಿಭಾಗದವರು ಶಾಲೆಗೆ ಎಂ ಆರ್ ಪಿ ಎಲ್ ವತಿಯಿಂದ ಸಭಾಂಗಣ ನಿರ್ಮಿಸಿ ಕೊಡುವಂತೆ ಮನವಿ ನೀಡಿದರು.


ಸುಳ್ಯ ತಾಲೂಕಿನ ಕೂರ್ನಡ್ಕ ಮತ್ತು ಬಡ್ಡಡ್ಕ ದಲ್ಲಿ ಮೊಬೈಲ್ ಫೋನ್ ಸಂಪರ್ಕ ಕಲ್ಪಿಸಿಕೊಡಲು ಮೊಬೈಲ್ ಟವರ್ ಕಾಮಗಾರಿಯನ್ನು ಪೂರ್ಣ ಮಾಡಿ ಕೊಡುವಂತೆ ಸ್ಥಳೀಯ ಬಿ ಜೆ ಪಿ ಬೂತ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಗಳು ಸಂಸದರಿಗೆ ಮನವಿ ಪತ್ರ ನೀಡಿದರು.


ದುಗಲಡ್ಕ ಮತ್ತು ಕೊಯಿಕುಳಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಮಾಡಿಕೊಡುವಂತೆ ಸ್ಥಳೀಯ ನಿವಾಸಿ ಹೇಮಂತ್ ಕುಮಾರ್ ಕಂದಡ್ಕರವರು ಮನವಿ ನೀಡಿದರು.


ಆರ್ತಾಜೆ ನಡುಬೆಟ್ಟು ಸಿಂಗಲ್ ಪೇಸ್ ನಿಂದ ತ್ರೀ ಪೇಸ್ ವಿದ್ಯುತ್ ಲೈನ್ ಒದಗಿಸುವಂತೆ ಸ್ಥಳೀಯ ನಿವಾಸಿ ವೆಂಕಟೇಶ್ ನಡುಬೆಟ್ಟು ಮನವಿ ನೀಡಿದರು.


ನ. ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಹಾಗೂ ನಾಮ ನಿರ್ದೇಶಕ ಸದಸ್ಯ ಸಿದ್ಧಿಕ್ ಕೊಕ್ಕೋ ರವರು ಸಂಸದರಿಗೆ ಮನವಿ ನೀಡಿ ಸುಳ್ಯದಲ್ಲಿ ಆಧಾರ್ ನೋಂದಣಿ ಕೇಂದ್ರಗಳ ಕೊರತೆ ಇದ್ದು ನಗರ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಧಾರ್ ಕೇಂದ್ರ ಒದಗಿಸುವಂತೆ ಮನವಿ ನೀಡಿದರು.


ಕೋಲ್ಚಾರು ಬಿ ಜೆ ಪಿ ಬೂತ್ ಅಧ್ಯಕ್ಷ ಯತೀ ರಾಜ್ ಕೊಯಿಂಗಾಜೆರವರು ಮನವಿ ನೀಡಿ ನಮ್ಮಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಇದ್ದು ಕಳೆದ 3 ವರ್ಷಗಳ ಹಿಂದೆಯೇ ಟಿ ಸಿ ಬದಲಾವಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡು ಬಂದಿದ್ದರು ಇದುವರೆಗೂ ಯಾವುದೇ ಸ್ಪಂದನೆ ಸಿಗಲಿಲ್ಲ. ಆದರಿಂದ ಕೂಡಲೇ ಸ್ಪಂದಿಸಿ ಸಹಕರಿಸುವಂತೆ ಮನವಿ ಮಾಡಿಕ್ಕೊಂಡರು.

ನಿವೃತ್ತ ಸೇನಾನಿ ಸಂಘದ ಕಚೇರಿ ತೆರೆಯಲು ಜಾಗದ ಬಗ್ಗೆ ಸ್ಪಂದಿಸುವಂತೆ ಹಿರಿಯ ಮಾಜಿ ಸೈನಿಕರಾದ ಅಡ್ಡಂತ್ತಡ್ಕ ದೇರಣ್ಣ ಗೌಡ ರವರು ಸಂಸದರಲ್ಲಿ ಮನವಿ ಮಾಡಿಕ್ಕೊಂಡರು.


ಅಲ್ಲದೇ ಇನ್ನು ಹಲವಾರು ಮಂದಿ ಬೇರೆ ಬೇರೆ ಅರೋಗ್ಯ, ರಸ್ತೆ, ಮುಂತಾದ ಸಮಸ್ಯೆಗಳ ಬಗ್ಗೆ ಮನವಿ ನೀಡಿದರು.


ಸಾರ್ವಜನಿಕರ ಮನವಿಯನ್ನು ಸ್ವೀಕರಿಸಿದ ಸಂಸದರು ವಿದ್ಯುತ್ ಸಮಸ್ಯೆ ಬಗ್ಗೆ ಹೆಚ್ಚು ಮನವಿ ಬಂದ ಹಿನ್ನಲೆಯಲ್ಲಿ ಮಂಗಳೂರು ಮೆಸ್ಕಾಂ ಹಿರಿಯ ಅಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಒಂದು ವಾರದಲ್ಲಿ ಸುಳ್ಯಕ್ಕೆ ಪುತ್ತೂರು ಎ ಇ ಇ ರವರನ್ನು ಕಳುಹಿಸಿ ವಿದ್ಯುತ್ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಸರ್ವೆ ನಡೆಸುವಂತೆ ಸೂಚನೆ ನೀಡಿದರು.

ಉಳಿದಂತೆ ಇತರ ಸಮಸ್ಯೆಗಳಿಗೆ ಸ್ಪಂದಿಸಿದ ಸಂಸದರು ಪರಿಹರಿಸಲ್ಪಡುವ ಸಮಸ್ಯೆಗಳಿಗೆ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


ಈ ಸಂಧರ್ಭದಲ್ಲಿ ಬಿ ಜೆ ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರುಗಳಾದ ಹರೀಶ್ ಕಂಜಿಪಿಲ್ಲಿ, ವಿನಯ ಕುಮಾರ್ ಕಂದಡ್ಕ, ಸಂತೋಷ್ ಕುತ್ತಮೊಟ್ಟೆ,ಸುನಿಲ್ ಕೇರ್ಪಳ,ಹರೀಶ್ ಬೂಡುಪನ್ನೆ,ಸುಳ್ಯ ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ ಮೊದಲಾದವರು ಉಪಸ್ಥಿತರಿದ್ದರು.

ನಗರ ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ,ಇದ್ದು ಸಕ್ಯಾ. ಚೌಟ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದು, ಸುಳ್ಯ ತಾಲೂಕಿನ ನಾಗರಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಈ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದು ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget