ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯುವ ಮುಖ ಡಿ.ಕೆ.ಅವಿನಾಶ್ ಕಣಕ್ಕೆ
ಸುಳ್ಯ: ಸುಳ್ಯ ಭೂ ಅಭಿವೃದ್ಧಿ (ಎಲ್ ಡಿ )ಬ್ಯಾಂಕ್ ಚುನಾವಣೆ ಜನವರಿ 12 ರಂದು ನಡೆಯಲಿದ್ದು ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೆ ಅವಿನಾಶ್ ಗೆ ಪಕ್ಷ ಅವಕಾಶ ನೀಡಿದ್ದು, ಸಹಕಾರ ಕ್ಷೇತ್ರ ಚುನಾವಣೆ ಯಲ್ಲಿ ತಾಲೂಕಿನ ಬಹುತೇಕ ಗ್ರಾಮದಲ್ಲಿ ಎರಡನೇ ಹಂತದ ನಾಯಕರಿಗೆ ಬಿಜೆಪಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ.ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನ ಸಾಲಗಾರರಲ್ಲದ ಕ್ಷೇತ್ರದಿಂದ ಸುಳ್ಯದ ಡಿ.ಕೆ ಅವಿನಾಶ್ ಸ್ಪರ್ಧಿಸುತ್ತಿದ್ದು ಬೆಂಗಳೂರಿನ ಸೈoಟ್ ಜೋಸೆಫ್ ಕಾಲೇಜ್ ಲ್ಲಿ ಬಿಯಸ್ಸಿ ಇನ್ ನ್ಯಾಚುರಲ್ ಸೈನ್ಸ್ ಪದವಿ ಪಡೆದಿದ್ದಾರೆ.
ಬಿಜೆಪಿ ಪರಿವಾರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸುಳ್ಯದಲ್ಲಿ ತುರ್ತು ಪರಿಸ್ಥಿತಿ ಕರಾಳ ಘಟನೆಯ 25 ವರ್ಷದ ಯಶಸ್ವಿ ಕಾರ್ಯಕ್ರಮದ ಸಹ ಸಂಚಾಲಕರಾಗಿ, 2023 ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ವಿಭಾಗ ಮಲ್ಲೇಶ್ವರಂ ಕ್ಷೇತ್ರ ಮತ್ತು 2024 ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ವಿಸ್ತಾರಕರಾಗಿ 2022 -2024 ವರೆಗೆ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಸುಳ್ಯ ಸೇವಾ ಭಾರತಿ ಟ್ರಸ್ಟಿಯಾಗಿ,ರೋಟರಿ ಕ್ಲಬ್ ಸದಸ್ಯರಾಗಿ ಪ್ರಸ್ತುತ ಶಿಕ್ಷಕರ ಪ್ರಕೋಷ್ಠ ಬಿಜೆಪಿ ಜಿಲ್ಲಾ ಸಂಚಾಲಕರಾಗಿದ್ದಾರೆ.ಮೊನ್ನೆ ನಡೆದ ಸುಳ್ಯ ಬ್ರಹ್ಮ ರಥೋತ್ಸವ ಸಮರ್ಪಣೆಯ ಮೆರವಣಿಗೆ ಸಮಿತಿ ಯ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇದೀಗ ಸಹಕಾರ ಕ್ಷೇತ್ರ ಚುನಾವಣೆ ಯಲ್ಲಿ ಹೊಸ ಮುಖ ಮತ್ತು ಎರಡನೇ ಹಂತ ನಾಯಕರ ಅವಕಾಶ ಮತ್ತು ಸಹಕಾರ ಕ್ಷೇತ್ರ ದ ಬೆಳವಣಿಗೆ ದೃಷ್ಟಿಯಿಂದ ಡಿ ಕೆ.ಅವಿನಾಶ್ ಯವರಿಗೆ ಪಕ್ಷ ಅವಕಾಶ ನೀಡಿದೆ.
Post a Comment