12 ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಜಯ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಿತು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಅಭ್ಯರ್ಥಿಗಳ ಜಯಗಳಿಸಿದ್ದು ಮತ್ತೆ ಆಡಳಿತ ಮಂಡಳಿಗೆ ಸಂಪೂರ್ಣ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿಯ 12 ಅಭ್ಯರ್ಥಿಗಳು, 2 ಪಕ್ಷೇತರ ಸ್ಪರ್ಧಿಸಿ ಸೋತಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸಾಮಾನ್ಯ ಸ್ಥಾನದಲ್ಲಿ ಅರುಣ್ ರೈ ಗೆಜ್ಜೆ,ಚಂದ್ರಶೇಖರ ಶಾಸ್ತ್ರಿ, ಚಿನ್ನಪ್ಪ ಗೌಡ ಚೊಟ್ಟೆಮಜಲು, ವಾಸುದೇವ ಕೆರೆಕ್ಕೊಡಿ, ಸದಾನಂದ ಕಾರ್ಜ, ಸುಬ್ರಹ್ಮಣ್ಯ ಕುಳ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಲ್ಲಿ ಮುದರ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಲ್ಲಿ ವಾಚಣ್ಣ ಕೆರೆಮೂಲೆ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಲ್ಲಿ ಲಿಗೋಧರ ಆಚಾರ್ಯ ಎನ್ ,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಲ್ಲಿ ತಿಮ್ಮಪ್ಪ ಗೌಡ ಕೂತ್ಕುಂಜ, ಮಹಿಳಾ ಮೀಸಲು ಸ್ಥಾನದಲ್ಲಿ ವನಿತಾ ಅತ್ಯಡ್ಕ, ಬೇಬಿ ಕಟ್ಟ ಜಯ ಗಳಿಸಿದ್ದಾರೆ.
Post a Comment