ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಾರ್ಟಿನ್ ಗುಪ್ಟಿಲ್; ಅಂದು ಭಾರತ ವಿಶ್ವಕಪ್ ಸೋಲಲು ಈತ ಪ್ರಮುಖ ಕಾರಣ

 

ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ (Martin Guptill) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಹಾಗೂ ಟೆಸ್ಟ್ ಮಾದರಿಗೆ ಗುಪ್ಟಿಲ್ ನಿವೃತ್ತಿ ಘೋಷಿಸಿದ್ದು, ಟಿ20 ಮಾದರಿಯಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ನಿವೃತ್ತಿಯ ಕುರಿತು ಪ್ರಕಟಣೆ ಹೊರಡಿಸಿರುವ ಮಾರ್ಟಿನ್ ಗುಪ್ಟಿಲ್ (Martin Guptill), ನಾನು ಚಿಕ್ಕ ಮಗುವಾಗಿದ್ದಾಗಿನಿಂದಲೂ ನ್ಯೂಜಿಲೆಂಡ್‌ಗೆ ಆಡುವುದ ನನ್ನ ಕನಸ್ಸಾಗಿತ್ತು. ನನ್ನ ದೇಶಕ್ಕಾಗಿ ನಾನು 367 ಪಂದ್ಯಗಳನ್ನು ಆಡಿದ್ದಕ್ಕಾಗಿ ಅದೃಷ್ಟ ಮತ್ತು ಹೆಮ್ಮೆ ಎಂದು ಭಾವಿಸುತ್ತೇನೆ. ವೃತ್ತಿಜೀವನದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದ ನನ್ನ ಎಲ್ಲಾ ತಂಡದ ಸಹ ಆಟಗಾರರಿಗೆ ಮತ್ತು ಕೋಚಿಂಗ್ ಸಿಬ್ಬಂದಿಗೆ, ವಿಶೇಷವಾಗಿ 19 ವರ್ಷದೊಳಗಿನವರ ಮಟ್ಟದಿಂದ ನನಗೆ ತರಬೇತಿ ನೀಡಿದ ಮಾರ್ಕ್ ಒ'ಡೊನೆಲ್ ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

14 ವರ್ಷಗಳ ಕಾಲ ನ್ಯೂಜಿಲೆಂಡ್ ತಂಡದ ಪರ ಆಡಿರುವ ಮಾರ್ಟಿನ್ ಗುಪ್ಟಿಲ್ (Martin Guptill) ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ದ್ವಿಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಮಾರ್ಟಿನ್ ಗುಪ್ಟಿಲ್ (Martin Guptill) ಮಹೇಂದ್ರ ಸಿಂಗ್ ಧೋನಿ ಅವರನ್ನು ರನ್‌ಔಟ್ ಮಾಡುವ ಮೂಲಕ ಭಾರತದ ಫೈನಲ್ ಕನಸು ಭಗ್ನವಾಗಲು ಕಾರಣವಾಗಿದ್ದರು.


ನ್ಯೂಜಿಲೆಂಡ್ ಪರ 198 ಏಕದಿನ, 122 ಟಿ20 ಮತ್ತು 47 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಾರ್ಟಿನ್ ಗಪ್ಟಿಲ್ ಕ್ರಮವಾಗಿ 17, 39, 20 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 3, ಏಕದಿನದಲ್ಲಿ 18, ಟಿ20 ಮಾದರಿಯಲ್ಲಿ 2 ಶತಕಗಳನ್ನು ಗುಪ್ಟಿಲ್ (Martin Guptill) ಬಾರಿಸಿದ್ದಾರೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget