ಸುಳ್ಯ ಚೆನ್ನಕೇಶವ ದೇವರ ನೂತನ ಬ್ರಹ್ಮರಥ ಭೂಸ್ಪರ್ಶ ಮಹೋತ್ಸವ

 ಡಾ.ಕೆ.ವಿ.ಚಿದಾನಂದ ಗೌಡ ಮತ್ತು ಮನೆಯವರಿಂದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ 


ಸುಳ್ಯ ಶ್ರೀ ಚೆನ್ನಕೇಶವ ದೇವಾಲಯಕ್ಕೆ ಡಾ.ಕುರುಂಜಿ ಚಿದಾನಂದ ಗೌಡ ಮತ್ತು ಮನೆಯವರಿಂದ ನೂತನ ಬ್ರಹ್ಮರಥ ಸಮರ್ಪಣೆಯ ಭೂಸ್ಪರ್ಶ ಮಹೋತ್ಸವವು ಇಂದು ಬೆಳಗ್ಗೆ 9.15 ರ ಸುಮೂಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮದೊಂದಿಗೆ ನೆರವೇರಿತು. 



ಬ್ರಹ್ಮರಥ ದಾನಿಗಳಾದ ಡಾ.ಕೆ.ವಿ.ಚಿದಾನಂದ, ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ,ಶ್ರೀಮತಿ ಐಶ್ವರ್ಯ ಗೌತಮ್ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯವರಾದ ಡಿ.ವಿ.ಸದಾನಂದ ಗೌಡ, ಮಾಜಿ ವಿಧಾನ ಸಭಾ ಅಧ್ಯಕ್ಷ ರಾದ ಕೆ.ಜಿ.ಬೋಪಯ್ಯ, ತಹಶಿಲ್ದಾರ್ ಮಂಜುಳಾ, ಬ್ರಹ್ಮ ರಥ ಸಮರ್ಪಣಾ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ನಾರಾಯಣ ಕೇಕಡ್ಕ,ಕೆ.ವಿ.ಹೇಮನಾಥ,ಡಾ.ಲೀಲಾಧರ್ ಡಿ.ವಿ, ಹರೀಶ್ ಕಂಜಿಪಿಲಿ, ಎನ್.ಎ.ರಾಮಚಂದ್ರ, ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಎಬ್.ಜಯಪ್ರಕಾಶ್ ರೈ,ಎಂ.ಬಿ ಸದಾಶಿವ ಹಾಗೂ ಕುರುಂಜಿ ಕುಟುಂಬಸ್ಥರು ಮತ್ತು ಭಕ್ತಾದಿಗಳು ಭಾಗವಹಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget