ಸಿಯಾಟಲ್: ಜನ್ಮದತ್ತ ಪೌರತ್ವವನ್ನು ರದ್ದು ನಿಯಮವನ್ನು ರದ್ದು ಮಾಡುವ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್ ನ್ಯಾಯಾಲವು ತಡೆ ನೀಡಿದೆ. ಟ್ರಂಪ್ ಅವರ ಈ ನಿರ್ಧಾರ ಅಸಂವಿಧಾನಿಕ ಎಂದು ಕರೆದಿದೆ.
ಜನ್ಮದಿಂದಾಗಿ ಸಿಗುವ ಅಮೆರಿಕ ಪೌರತ್ವದ ನಿಯಮವನ್ನು ಅಧಿಕಾರ ವಹಿಸಿಕೊಂಡ ಮೊದಲೆ ದಿನವೇ ಡೊನಾಲ್ಡ್ ಟ್ರಂಪ್ ರದ್ದು ಮಾಡಿದ್ದರು. ಕೋರ್ಟ್ ಆದೇಶದಿಂದಾಗಿ ಅವರಿಗೆ ಮುಖಭಂಗವಾಗಿದೆ.
ಟ್ರಂಪ್ ಅವರ ಆದೇಶ ಪ್ರಶ್ನಿಸಿ ಹಲವು ರಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ನ್ಯಾಯಮೂರ್ತಿ ಜಾನ್ ಕಫೆನಾರ್ ಟ್ರಂಪ್ ಆದೇಶಕ್ಕೆ 14 ದಿನಗಳ ತಾತ್ಕಾಲಿಕ ತಡೆ ನೀಡಿದ್ದಾರೆ.
'ಈ ನಿರ್ಧಾರ ಸಂವಿಧಾನಿಕ ಎಂದು ಬಾರ್‌ನ ವಕೀಲರೊಬ್ಬರು ವಾದ ಮಾಡಲು ಹೇಗೆ ಸಾಧ್ಯ' ಎಂದು ಅಮೆರಿಕದ ನ್ಯಾಯ ಇಲಾಖೆಯ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ಗೆ ನ್ಯಾಯಾಧೀಶರು ಪ್ರಶ್ನಿಸಿದರಲ್ಲದೆ, ಇದು ನನ್ನ ಮನಸನ್ನು ಕೆರಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟ್ರಂಪ್ ಆದೇಶ ಏನು?
ಟ್ರಂಪ್ ಅವರ ಹೊಸ ಆದೇಶವು, ಹುಟ್ಟಿನಿಂದಲೇ ಸ್ವಯಂಚಾಲಿತವಾಗಿ ಪೌರತ್ವ ದತ್ತವಾಗುವುದಿಲ್ಲ.ಮಗುವಿನ ತಾಯಿ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಇಲ್ಲದಿದ್ದರೆ ಅಥವಾ ತಂದೆ ಕಾನೂನು ಬದ್ಧವಾಗಿ ಅಮೆರಿಕದ ಖಾಯಂ ನಿವಾಸಿ ಆಗಿರದಿದ್ದರೆ ಅಂಥವರಿಗೆ ಹುಟ್ಟಿನಿಂದಲೇ ಪೌರತ್ವ ಪ್ರಾಪ್ತವಾಗುವುದಿಲ್ಲ.
ತಾಯಿ ಕಾನೂನುಬದ್ಧವಾಗಿ ಅಮೆರಿಕದ ಖಾಯಂ ನಿವಾಸಿಯಾಗಿದ್ದು, ತಂದೆ ತಾತ್ಕಾಲಿಕ ನಾಗರಿಕನಾಗಿದ್ದರೆ ಅಂಥವರು ಹುಟ್ಟಿನಿಂದಾಗಿ ಸಿಗುವ ಪೌರತ್ವಕ್ಕೆ ಅರ್ಹರಲ್ಲ.
Post a Comment