ದೋಹಾ(ಕತಾರ್): ಮಹತ್ವದ ಬೆಳವಣಿಗೆಯೊಂದರಲ್ಲಿ, ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಹಾಗೂ ಬಂಡುಕೋರರ ಸಂಘಟನೆ ಹಮಾಸ್ ಒಪ್ಪಿವೆ ಎಂದು ಸಂಧಾನಕಾರರು ಬುಧವಾರ ಘೋಷಿಸಿದ್ದಾರೆ.
ಕತಾರ್ ರಾಜಧಾನಿಯಲ್ಲಿ ಹಲವು ವಾರಗಳು ನಡೆದ ಸಂಧಾನ ಮಾತುಕತೆ ನಂತರ ಈ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳನ್ನು ಹಮಾಸ್ ಹಂತಹಂತವಾಗಿ ಬಿಡುಗಡೆ ಮಾಡಲಿದ್ದರೆ, ತನ್ನ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲು ಇಸ್ರೇಲ್ ಸಮ್ಮತಿಸಿದೆ ಎಂದು ಸಂಧಾನಕಾರರು ತಿಳಿಸಿದ್ದಾರೆ.
ಕದನ ವಿರಾಮ ಕುರಿತು ಒಪ್ಪಂದವಾಗಿರುವುದನ್ನು ಅಮೆರಿಕದ ಮೂವರು ಅಧಿಕಾರಿಗಳು ಹಾಗೂ ಹಮಾಸ್ ಪ್ರತಿನಿಧಿಯೊಬ್ಬರು ಖಚಿತಪಡಿಸಿದ್ದಾರೆ. ಒಪ್ಪಂದ ಕುರಿತ ವಿವರಗಳು ಗೊತ್ತಾಗಬೇಕಿದೆ ಎಂದು ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರೊಂದಿಗೆ, ಗಾಜಾಪಟ್ಟಿಯಲ್ಲಿ ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ಯುದ್ಧಕ್ಕೆ ತಡೆ ಬೀಳಲಿದೆ.
Post a Comment