ಬೆಂಗಳೂರು: ಬಿಗ್ ಬಾಸ್ ಸೀಸನ್ -11 ಮನೆಗೆ ಮೊದಲ ಫೈನಾಲಿಸ್ಟ್ ಸಿಕ್ಕಿದ್ದಾರೆ. ನೀವು ಫಿನಾಲೆ ಟಾಸ್ಕ್ ಗೆ ಅರ್ಹರಾಗಿದ್ದೀರಿ ಎಂದು ಗೌತಮಿ ಅವರು ಮಂಜು ಅವರಿಗೆ ಹೇಳಿದ್ದಾರೆ. ಆ ಬಳಿಕ ದೊತ್ಮನೆಯಲ್ಲಿ ಫಿನಾಲೆ ಟಾಸ್ಕ್ ಶುರುವಾಗಿದೆ.
ರಜತ್, ಹನುಮಂತು, ಭವ್ಯ ಹಾಗೂ ತಿವಿಕ್ರಮ್ ಅವರಿಗೆ ಸಾಹಸಮಯ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಯಾರು ತುಂಬಾ ಬೇಗ ಟಾಸ್ಕ್ ಪೂರ್ತಿಗೊಳಿಸುತ್ತಾರೋ ಅವರು ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ.
ಅದರಂತೆ ನಾಲ್ವರು ತೀವ್ರ ಪೈಪೋಟಿ ನೀಡಿ ಟಾಸ್ಕ್ ಪೂರ್ತಿಗೊಳಿಸಿದ್ದಾರೆ. 'ಭೂ ಮಂತರ್' ಸಿನಿಮಾದ ಪ್ರಚಾರಕ್ಕೆ ಬಂದ ಶರಣು ಹಾಗೂ ಚಿತ್ರದ ನಾಯಕಿ ಅದಿತಿ ಅವರು ಬಿಗ್ ಬಾಸ್ ಮನೆಗೆ ಬಂದು ಫಿನಾಲೆ ಟಿಕೆಟ್ ಕೊಟ್ಟಿದ್ದಾರೆ.
ಭವ್ಯ ಅವರು ಟಾಸ್ಕ್ ಪೂರ್ತಿಗೊಳಿಸಲು 3 ನಿಮಿಷ 22 ಸೆಕೆಂಡ್ ಗಳನ್ನು ತೆಗೆದುಕೊಂಡಿದ್ದಾರೆ. ರಜತ್ ಅವರು 3 ನಿಮಿಷ 49 ಸೆಕೆಂಡ್, ತ್ರಿವಿಕ್ರಮ್ ಅವರು 2 ನಿಮಿಷ 29 ಸೆಕೆಂಡ್ ಗಳನ್ನು ತೆಗೆದುಕೊಂಡಿದ್ದಾರೆ. ಹನುಮಂತು ಅವರು 2 ನಿಮಿಷ 27 ಸೆಕೆಂಡ್ ಗಳಲ್ಲಿ ಟಾಸ್ಕ್ ಪೂರ್ತಿಗೊಳಿಸಿದ್ದಾರೆ.
ಟಾಸ್ಕ್ ವೇಗವಾಗಿ ಪೂರ್ತಿಗೊಳಿಸಿದ ಹನುಮಂತು ಅವರಿಗೆ ಶರಣ್ ಫಿನಾಲೆ ಟಿಕೆಟ್ ಹಸ್ತಾಂತರ ಮಾಡಿದ್ದಾರೆ. ಫಿನಾಲೆಗೆ ಹೋದ ಸ್ಪರ್ಧಿ ಮನೆಯ ಕೊನೆಯ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದಾರೆ.
ನಾನು ಅನ್ನೊಂಡಿರಲಿಲ್ಲ ಇದನ್ನು ಸಾಧಿಸುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದವೆಂದು ಹನುಮಂತು ಹೇಳಿದ್ದಾರೆ.ಇನ್ನು ಈ ವಾರ ಕಳಪೆಯನ್ನು ಮಂಜು ಅವರಿಗೆ ಮನೆಮಂದಿ ನೀಡಿದ್ದಾರೆ.
ಚೈತ್ರಾ, ಹನುಮಂತು, ಗೌತಮಿ, ರಜತ್, ಮೋಕ್ಷಿತಾ ಅವರು ಮಂಜು ಅವರಿಗೆ ಕಳಪೆ ನೀಡಿದ್ದಾರೆ. ಕಳಪೆ ಬಟ್ಟೆಯನ್ನು ತೊಟ್ಟು ಮಂಜು ಜೈಲಿಗೆ ಹೋಗಿದ್ದಾರೆ.
Post a Comment