ಶಾಸಕ ಡಿ. ವೇದವ್ಯಾಸ್ ಕಾಮತ್ ಅವರಿಂದ ಮಂಗಳೂರಿನಲ್ಲಿ ಶ್ರೀ ಮಾಧವ ಮಂಗಳ ಸಭಾಭವನ ಉದ್ಘಾಟನೆ



 ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ವಿಶೇಷ ಅನುದಾನದಡಿ ಸುಮಾರು ಹನ್ನೆರಡು ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಾಧವ ಮಂಗಳ ಸಭಾಭವನದ ಉದ್ಘಾಟನಾ ಸಮಾರಂಭವನ್ನು ಕುದ್ರೋಳಿ ಗ್ರಾಮ ಮೊಗವೀರ ಮಹಾಸಭಾದ ಅಧೀನಕ್ಕೆ ಒಳಪಟ್ಟ ಸ್ಥಳದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ರವರು ನೆರವೇರಿಸಿದರು. 


ನಂತರ ಮಾತನಾಡಿದ ಶಾಸಕರು, ಶ್ರಮಜೀವಿಗಳಾದ ಮೊಗವೀರ ಸಮುದಾಯದ್ದು ಸ್ವಾಭಿಮಾನದ ಬದುಕು. ಅಂತಹ ಸಮುದಾಯದ ಬಹುಕಾಲದ ಬೇಡಿಕೆಯನ್ನು ಶಾಸಕರ ಅನುದಾನದ ಮೂಲಕ ಈಡೇರಿಸಲಾಗಿದ್ದು, ಮುಂದೆ ಇಲ್ಲಿ ಹೆಚ್ಚು ಹೆಚ್ಚು ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.



ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮುಕ್ತೇಸರರಾದ ಲಕ್ಷಣ್ ಅಮೀನ್ ಕೋಡಿಕಲ್, ಯುಎಇ ಮೊಗವೀರ ಸಂಘದ ಅಧ್ಯಕ್ಷರಾದ ಸಿ.ಎ. ಲೋಕೇಶ್ ಪುತ್ರನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಭಾದ ಉಪಾಧ್ಯಕ್ಷರಾದ ಮೋಹನ್ ಬೆಂಗ್ರೆ, ದ.ಕ ಮೊಗವೀರ ಸಂಯುಕ್ತ ಮಹಾಸಭಾ ಅಧ್ಯಕ್ಷರಾದ ಭರತ್ ಕುಮಾರ್ ಉಳ್ಳಾಲ್, ಮಂಗಳೂರು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಟ್ರಾಲ್ ಬೋಟ್ ಮೀನುಗಾರರ ಸಂಘ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಏಳುಪಟ್ಟ ಮೊಗವೀರ ಸಂಯುಕ್ತ ಸಭಾ ಕದ್ರಿ ಅಧ್ಯಕ್ಷರಾದ ಸುಭಾಶ್ಚಂದ್ರ ಕಾಂಚನ್, ಕುದ್ರೋಳಿ 3ನೇ ಗ್ರಾಮ ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಉರ್ವದ ಅಧ್ಯಕ್ಷರಾದ ಲೋಕೇಶ್ ಸುವರ್ಣ, ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷರಾದ ಯಶವಂತ್ ಮೆಂಡನ್, ಕುದ್ರೋಳಿ 2ನೇ ಗ್ರಾಮ ಮೊಗವೀರ ಮಹಾಸಭಾ ಅಧ್ಯಕ್ಷರಾದ ಚಂದ್ರಹಾಸ್ ಸುವರ್ಣ, ಬೊಕ್ಕಪಟ್ಣ ಮೊಗವೀರ ಗ್ರಾಮಸಭಾ ಅಧ್ಯಕ್ಷರಾದ ನಾರಾಯಣ ಕೋಟ್ಯಾನ್, ಪಾಲಿಕೆ ಸದಸ್ಯ ಸಂಶುದ್ದೀನ್, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿಯ ಅಧ್ಯಕ್ಷರಾದ ಯಾಸಿನ್, ಗಣೇಶ್ ಫ್ರೆಂಡ್ಸ್, ಸರ್ಕಲ್ ಕುದ್ರೋಳಿಯ ಅಧ್ಯಕ್ಷರಾದ ವಿಶು ಕುಮಾರ್, ಸುಮಂಗಳ ಕೇಟರಿಂಗ್ ಮಾಲಕರಾದ 

ಸುನಿಲ್ ಕುಮಾರ್, ಕುದ್ರೋಳಿ ಮೊಗವೀರ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ದೇವಕಿ ಎಲ್ ಸುವರ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget