ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವ ಹೂವಿನ ಅಲಂಕಾರ



 ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಹೂವಿನ ಅಲಂಕಾರ ಭಕ್ತರ ಮನ ಸೆಳೆಯುತ್ತಿದೆ! ಹೂವಿನ ಮಧ್ಯದಲ್ಲಿ ಅಲಂಕೃತಗೊಂಡ ದೇವಿಯನ್ನು ನೋಡಲು ಕಣ್ತುಂಬಿಸಿಕೊಳ್ಳುವುದೇ ಅಂದ..

ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸುತ್ತಿವೆ. ಅಬ್ಟಾ..ಅಬ್ಟಾ.. ಅನ್ನುವಷ್ಟು ಹೂವಿನ ರಾಶಿಯೇ ತುಂಬಿದೆ. ಕ್ಷೇತ್ರದ ಭಕ್ತರೊಬ್ಬರು ಹಲವು ವರ್ಷದಿಂದ ಸೇವಾ ರೂಪದಲ್ಲಿ ಈ ಹೂವಿನ ಅಲಂಕಾರ ಅರ್ಪಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದರ ಪ್ರಮಾಣ ಹೆಚ್ಚಾಗುತ್ತಿರುವುದಿಂದ ಇಡಿ ದೇವಾಲಯದಲ್ಲಿ ಹೂವುಗಳ ತೋಟವೇ ಮೈದಳೆದಂತಿದೆ.


ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನವು ಪ್ರತಿ ವರ್ಷ  ಹೂವಿನಿಂದ ಅಲಂಕರದಿಂದ ಕಂಗೊಳಿಸಲು ಮಹತ್ವದ ಕಾರಣ ದೇವಿ ಭಕ್ತ  ಪೆರುವಾಜೆ ಗ್ರಾಮದ ನಿವಾಸಿ, ಮಂಗಳೂರಿನ ಐರಿಷ್‌ ಫ್ಲವರ್‌ ಸ್ಟಾಲ್‌ ಮಾಲಕ ಉಮೇಶ್‌ ಕೊಟ್ಟೆಕಾೖ ಮತ್ತು ಅವರ ಮನೆ ಮಂದಿ. ಹಲವು ವರ್ಷಗಳಿಂದ ಸೇವೆ ಮಾಡುವ ಉಮೇಶ್‌ ಮತ್ತು ಅವರ ಕುಟುಂಬ ಶ್ರೀ ಕ್ಷೇತ್ರದ ಪರಮ ಭಕ್ತರು.

ಉಮೇಶ್‌ ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಆರಂಭಿಸಿ, ಬಳಿಕ ಮಂಗಳೂರು ಮತ್ತು ಉಡುಪಿಯಲ್ಲಿ ಐರಿಷ್‌ ಫ್ಲವರ್‌ ಸ್ಟಾಲ್‌ ಸ್ವಂತ ಮಾರಾಟ ಕೇಂದ್ರ ಸ್ಥಾಪಿಸಿದ್ದರು. 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ಗಳಿಸಿರುವ ಇವರು, ಇದಕ್ಕೆ ಜಲದುರ್ಗಾದೇವಿಯ ಕೃಪೆಯೇ ಕಾರಣ ಎಂದು ಭಕ್ತನ ನೆಲೆಯಲ್ಲಿ ದೇವಿಗೆ ಹೂವಿನ ಅಲಂಕಾರ ಮಾಡುತ್ತಾರೆ.


2006ರಿಂದ ಈ ಸೇವೆ ಆರಂಭಿಸಿದ್ದು, 2016ರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕೂಡ ದೇವಾಲಯವನ್ನು ಹೂವಿನಿಂದ ಶೃಂಗರಿಸಿದ್ದರು. ಪ್ರತಿ ಬಾರಿಯು ಕಳೆದ ವರ್ಷಕ್ಕಿಂತ ಹೆಚ್ಚು-ಹೆಚ್ಚು ಹೂವು ಅರ್ಪಿಸುತ್ತಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget