ಅಡಿಕೆ ವ್ಯವಹಾರವನ್ನು ತಲ್ಲಣಗೊಳಿಸುವ ಮತ್ತೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಿಂದ ವರದಿಯಾಗಿದೆ. ಸ್ಥಳೀಯ ಅಡಿಕೆ ವ್ಯಾಪಾರಿಗಳಿಗೆ ಉತ್ತರ ಭಾರತದ ಸೇಟ್ ಗಳು ಹಣ ವಂಚಿಸಿ ಪರಾರಿಯಾಗುತ್ತಿರುವ ಘಟನೆಗಳು ಕಳೆದ ಐದಾರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ.
ಸುಳ್ಯ, ಜ 17: ಅಡಿಕೆ ವ್ಯವಹಾರವನ್ನು ತಲ್ಲಣಗೊಳಿಸುವ ಮತ್ತೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಿಂದ ವರದಿಯಾಗಿದೆ. ಸ್ಥಳೀಯ ಅಡಿಕೆ ವ್ಯಾಪಾರಿಗಳಿಗೆ ಉತ್ತರ ಭಾರತದ ಸೇಟ್ ಗಳು ಹಣ ವಂಚಿಸಿ ಪರಾರಿಯಾಗುತ್ತಿರುವ ಘಟನೆಗಳು ಕಳೆದ ಐದಾರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ.
ಅಡಿಕೆ ವ್ಯಾಪಾರವು ಸ್ಥಳೀಯ ವ್ಯಾಪಾರಿಗಳು ಹಾಗೂ ಉತ್ತರ ಭಾರತದ ಸೇಟ್ ಗಳು ಅದರಲ್ಲೂ ವಿಶೇಷವಾಗಿ ಗುಜರಾತ್ ಮೂಲದ ವ್ಯಾಪರಿಗಳ ವಿಶ್ವಾಸದ ನೀತಿಯ ಮೇಲೆ ನಡೆಯುತ್ತದೆ. ಸ್ಥಳೀಯ ವ್ಯಾಪಾರಿಗಳಿಗೆ ಅಗತ್ಯ ಬಿದ್ದಾಗ ಖರೀದಿಗೆ ಹಣವನ್ನು ಈ ಸೇಟುಗಳು ನೀಡಿದರೇ, ಹಲವು ಅಡಿಕೆ ಮಾರಾಟವಾದ ಮೇಲೆ ಸ್ಥಳೀಯ ವ್ಯಾಪಾರಿಗಳು ಸೇಟುಗಳಿಗೆ ಹಣ ನೀಡುತ್ತಾರೆ. ಈ ಪ್ರಕ್ರಿಯೆ ವಿಶ್ವಾಸ ಹಾಗೂ ನಂಬಿಕೆಯ ಮೇಲೆಯೇ ಹೆಚ್ಚಾಗಿ ನಡೆಯುತ್ತದೆ.
ಇದೀಗ ಈ ನಂಬಿಕೆಯನ್ನೆ ಬಳಸಿಕೊಂಡು ಉತ್ತರ ಭಾರತದ ವ್ಯಾಪಾರಿಗಳು ಹತ್ತಾರು ಸ್ಥಳೀಯ ವ್ಯಾಪಾರಸ್ಥರಿಂದ ಹಣ ಮತ್ತೆ ನೀಡುವುದಾಗಿ ತಿಳಿಸಿ ಅಡಿಕೆ ಖರೀದಿಸಿ ಬಳಿಕ ಅಷ್ಟು ಹಣವನ್ನು ವಂಚಿಸಿ ಪರಾರಿಯಾಗುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡಿದ ಅಡಿಕೆಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳದಿರುವುದರಿಂದ ಅವರಿಗೆ ಕೇಸ್ ಮಾಡಲು ಆಗದೇ ಪರದಾಡುತ್ತಿದ್ದಾರೆ.ಇದನ್ನೆ ಬಂಡವಾಳವಾಗಿಸಿಕೊಂಡು ಉತ್ತರ ಭಾರತದ ಕೆಲವು ಸೇಟ್ ಗಳು ಸ್ಥಳೀಯ ವ್ಯಾಪಾರಿಗಳಿಗೆ ಉಂಡೆನಾಮ ಇಕ್ಕುತ್ತಿದ್ದಾರೆ.
ಬೆಳ್ಳಾರೆಯ ಪ್ರಕರಣವೇನು ?
ಪುತ್ತೂರಿನ ವ್ಯಕ್ತಿಯೋರ್ವರು ಬೆಳ್ಳಾರೆಯಲ್ಲಿ ಅಡಿಕೆ ವ್ಯವಹಾರ ನಡೆಸುತ್ತಿದ್ದು, ಅವರಿಗೆ ಗುಜರಾತ್ ಮೂಲದ ಹಿದಾಯ ಮಧುಬಾಯಿ (46) ಅವರು ಒಣ ಅಡಿಕೆ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಈ ಕುರಿತು ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದೆ.
ಹಿದಾಯ ಮಧುಬಾಯಿಯವರು ಬೆಳ್ಳಾರೆಯ ಅಡಿಕೆ ವ್ಯಾಪಾರಿಗೆ ಕರೆ ಮಾಡಿ ಅಡಿಕೆ ಖರೀದಿಸುವುದಾಗಿ ತಿಳಿಸಿ ದರ ನಿಗದಿ ಮಾಡಿಕೊಂಡಿದ್ದಾರೆ. ಅದರಂತೆ ವ್ಯಾಪಾರಿಯು ಆತನಿಗೆ 2024ರ ಡಿ 5ರಂದು ಒಟ್ಟು 1,040 ಕೆಜಿ ಒಣ ಅಡಿಕೆ ಕಳುಹಿಸಿದ್ದಾರೆ. ಅದರ ಮೌಲ್ಯ 3.05 ಲಕ್ಷ ರೂ. ಅನ್ನು ವ್ಯಾಪಾರಿಯ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.
ಎರಡನೇ ಬಾರಿಗೆ ವ್ಯಾಪಾರಿ 2,730 ಕೆ.ಜಿ ಒಣ ಅಡಿಕೆಯನ್ನು 2024ರ ಡಿ. 17ರಂದು ಗುಜರಾತಿಗೆ ಕಳುಹಿಸಿಕೊಟ್ಟಿದ್ದು, ಅದರ ಒಟ್ಟು ಮೌಲ್ಯ 8,02,620 ರೂ. ಆಗಿದ್ದು ಅದರಲ್ಲಿ 2.03.840 ರೂ. ಅನ್ನು ಬ್ಯಾಂಕ್ ಖಾತೆಗೆ ಹಾಕಿದ್ದು, ಉಳಿದ 5,98,780 ರೂ. ಅನ್ನು ಬಾಕಿ ಇರಿಸಿಕೊಂಡು ವಂಚಿಸಿದ್ದಾನೆ. ಗುಜರಾತಿನ ವ್ಯಾಪಾರಿ ಹಣ ಪಾವತಿಸಿದೇ ವಂಚಿಸಿದ್ದಾಗಿ ಆರೋಪಿಸಿ ಅಡಿಕೆ ವ್ಯಾಪಾರಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment