ಮಂಗಳೂರು: ಜಾತಿ ಗಣತಿಗೆ ಸಂಬಂಧಿಸಿದ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವರದಿಯನ್ನು ಮಂಡಿಸುವುದಾಗಿ ಜನರಿಗೆ ಭರವಸೆ ಕೊಡಲಾಗಿದೆ. ಅದನ್ನು ಈಡೇರಿಸಲಾಗುವುದು ಎಂದರು.
'ವರದಿಗೆ ನಿಮ್ಮ ಪಕ್ಷದಲ್ಲೇ ವಿರೋಧವಿದೆಯಲ್ಲ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ವರದಿಯಲ್ಲಿ ಏನಿದೆ ಎಂದು ನಾನು ಸೇರಿದಂತೆ ಯಾರಿಗೂ ಗೊತ್ತಿಲ್ಲ, ಹಾಗಿರುವಾಗ ವಿರೋಧ ಮಾಡುವುದಾದರೂ ಯಾಕೆ' ಎಂದು ಮರುಪ್ರಶ್ನೆ ಹಾಕಿದರು.
Post a Comment