ಕರಾವಳಿ ಉತ್ಸವದಲ್ಲಿ 'ವೋಕಲ್ ಫಾರ್ ಲೋಕಲ್' ಧ್ಯೇಯದಂತೆ ವ್ಯಾಪಾರಸ್ಥರೇಡೆಗೆ ತೆರಳಿ ಪ್ರೋತ್ಸಾಹಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

 



ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರಾವಳಿಯ ಉತ್ಸವಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ್ದಾರೆ. 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ನವ ಭಾರತದ ಧ್ಯೇಯ 'ವೋಕಲ್ ಫಾರ್ ಲೋಕಲ್ ' ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಇಲ್ಲಿನ ವಸ್ತುಪ್ರದರ್ಶನ ಮಳಿಗೆಗಳಿಗೆ ತೆರಳಿ ಕರಾವಳಿಯ ವೈವಿಧ್ಯತೆಗಳನ್ನು ಪ್ರತಿಬಿಂಬಿಸುವ ಸ್ವ ಉದ್ದಿಮೆ, ಗುಡಿಕೈಗಾರಿಕೆ ಹಾಗೂ ಇತರ ವ್ಯಾಪಾರಸ್ಥರಿಗೆ ಪ್ರೋತ್ಸಾಹಕ ಮಾತುಗಳನ್ನಾಡಿದರು. 



ಈ ವೇಳೆ ಕರಕುಶಕರ್ಮಿ, ಸ್ವ ಉದ್ಯಮಿ, ವ್ಯಾಪಾರಸ್ಥರ ಸಬಲೀಕರಣಗೊಳಿಸುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯು ಅರಿವು ಮೂಡಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget