ಸಂವಿಧಾನ 1000 ವರ್ಷ ಹಳೆಯದು: ರಾಹುಲ್‌!

Picture of Savistara

Savistara

Bureau Report

ಪಾಟ್ನಾದಲ್ಲಿ ನೀಡಿದ್ದ ಹೇಳಿಕೆಗೆ ಬಿಜೆಪಿ ಲೇವಡಿ

ನವದೆಹಲಿ: ದೇಶದ ಸಂವಿಧಾನ ಸಾವಿರಾರುವರ್ಷಗಳಷ್ಟು ಹಳೆಯದು ಎಂದು ಹೇಳುವ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಗೆಪಾಟಲಿಗೀಡಾಗಿದ್ದಾರೆ.ಬಿಹಾರದ ಪಾಟ್ನಾದಲ್ಲಿ ಸೋಮವಾರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, “ದೇಶದ ಸಂವಿಧಾನ 1947ರಲ್ಲಿ ರಚಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅದನ್ನು 1000 ವರ್ಷಗಳ ಹಿಂದೆಯೇ ರಚಿಸಲಾಗಿದೆ. ಅದರಲ್ಲಿ ಬಿ.ಆ‌ರ್.ಅಂಬೇಡ್ಕರ್, ಮಹಾತ್ಮ ಗಾಂಧಿ, ಗುರು ನಾನಕ್, ಜವಾಹರ್‌ಲಾಲ್‌ ನೆಹರೂ ಮತ್ತು ಸಂತ ಕಬೀರ್ ಅವರ ಚಿಂತನೆಗಳು ಸೇರಿವೆ’ ಎಂದು ಹೇಳಿದ್ದರು.ಇಂಥ ಜ್ಞಾನವಿರುವ ವಿಪಕ್ಷ ನಾಯಕನನ್ನು ಹೊಂದಿರುವುದು ದೇಶಕ್ಕೇ ಅವಮಾನ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ. 1947ರಲ್ಲಿ ಸಂವಿಧಾನ ರಚನಾ ಸಭೆ ಸಂವಿಧಾನ ರಚಿಸುವ ಬಗ್ಗೆ ಸಭೆ ಆರಂಭಿಸಿತ್ತು. 1949 ನ.26ರಂದು ಸಂವಿಧಾನ ರಚನೆಯನ್ನು ಅಂತಿಮಪಡಿಸಲಾಯಿತು. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಪ್ರತಿ ವರ್ಷದ ನ.26ರಂದು ಸಂವಿಧಾನ ದಿನ ಎಂದು ಆಚರಿಸಲು ತೀರ್ಮಾನಿಸಿದ್ದಾರೆ ಎಂದರು. ಪಕ್ಷದ ಇತರ

ನಾಯಕರಾಗಿರುವ ಜೈವೀರ್ ಶೆಗ್ರಿಲ್, ಅಜಯ್ ಅಲೋಕ್ ಕೂಡ ರಾಹುಲ್ ಹೇಳಿಕೆಯನ್ನು ಟೀಕಿಸಿ, ವ್ಯಂಗ್ಯವಾಡಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!