ನಾಗಾಲೋಟ ನಿಲ್ಲಿಸಿದ ಚಿನ್ನದ ಬೆಲೆ

Picture of Savistara

Savistara

Bureau Report

ನವದೆಹಲಿ: ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 500 ರೂ.ಇಳಿಕೆಯಾಗಿ 10 ಗ್ರಾಂಗೆ 1,20,600 ರೂ.ಗೆ ತಲುಪಿದ್ದು, ಸತತ ಐದು ದಿನಗಳ ದಾಖಲೆ ಹೆಚ್ಚಳ ಕೊನೆಗೊಂಡಿದೆ. ಶೇ. 99.9 ಶುದ್ಧತೆಯ ಚಿನ್ನ ಬುಧವಾರ 1,100 ರೂ. ಏರಿಕೆಯೊಂದಿಗೆ 1,21,100 ರೂ. ದಾಖಲೆ ಗರಿಷ್ಠ ಮಟ್ಟ ತಲುಪಿತ್ತು. ಶೇ. 99.5 ಶುದ್ಧತೆಯ ಚಿನ್ನವೂ ತನ್ನ ಗರಿಷ್ಠ ಮಟ್ಟದಿಂದ 500 ರೂ. ಇಳಿಕೆಯಾಗಿ 1,20,000 ರೂ.ಗೆ ತಲುಪಿತು. ಇದು ಬುಧವಾರ 1,20,500 ರೂ.ಗೆ ಮುಕ್ತಾಯವಾಗಿತ್ತು. ಬೆಳ್ಳಿಯ ಬೆಲೆಯೂ 500 ರೂ. ಇಳಿಕೆಯಾಗಿ ಕೆಜಿಗೆ 1,50,000 ರೂ.ಗೆ ತಲುಪಿತು. ಇದು ಬುಧವಾರ 1,50,500 ರೂ.ಗೆ ಮುಕ್ತಾಯವಾಗಿತ್ತು. ಗಾಂಧಿಜಯಂತಿ ಮತ್ತು ದಸರಾ ಹಿನ್ನೆಲೆಯಲ್ಲಿ ಗುರುವಾರಚಿನ್ನಬೆಳ್ಳಿ ಮಾರುಕಟ್ಟೆ ಬಂದ್‌ ಇತ್ತು.

ದರ ಹೆಚ್ಚಳದಲ್ಲಿ ಚಿನ್ನವನ್ನು ಮೀರಿಸಿದ ಬೆಳ್ಳಿ

ನವದೆಹಲಿ: ಬೆಲೆ ಏರಿಕೆಯ ವಿಷಯದಲ್ಲಿ ಬೆಳ್ಳಿಯು ಚಿನ್ನವನ್ನು ಹಿಂದಿಕ್ಕಿದೆ. ಬೆಳ್ಳಿಯ ಬೆಲೆ ಸೆಪ್ಟೆಂಬರ್‌ನಲ್ಲಿ ಶೇ. 19.4 ಏರಿಕೆಯಾಗಿದ್ದರೆ, ಚಿನ್ನದ ಬೆಲೆ ಶೇ. 13ರಷ್ಟು ಏರಿಕೆ ಕಂಡಿದೆ. ಆಭರಣ ವಲಯದಲ್ಲಿ ಮಾತ್ರವಲ್ಲದೆ ಸೌರ ಶಕ್ತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳ್ಳಿಗೆ ಇರುವ ಬೇಡಿಕೆ ಇದಕ್ಕೆ ಕಾರಣವಾಗಿದೆ. ಬೆಳ್ಳಿ ໖໖ 1.100 1,26,000 4. 盛 3. 300 1,50,500 2. ಏರಿಕೆಯಾಗಿತ್ತು. ಚಿನ್ನದ ಬೆಲೆ ಸೆ. 1ರಂದು 10 ಗ್ರಾಂಗೆ 1,05,670 ರೂ. ಇದ್ದದ್ದು ಸೆ. 30ರಂದು 1,20,000 ರೂ.ಗೆ ತಲುಪಿತ್ತು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!