RSS: ಸಂಘ ಶತಮಾನೋತ್ಸವಕ್ಕೆ ತಾರಾ ಮೆರುಗು; ಸಲ್ಮಾನ್ ಖಾನ್‌ನಿಂದ ಹೇಮಾ ಮಾಲಿನಿಯವರೆಗೆ ಯಾರೆಲ್ಲ ಹಾಜರಿ! ಇಲ್ಲಿದೆ ಮಾಹಿತಿ!

Picture of Savistara

Savistara

Bureau Report

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ಶನಿವಾರ ಮುಂಬೈನಲ್ಲಿ ‘ಸಂಘಯಾತ್ರೆ, 100 ವರ್ಷಗಳು – ಹೊಸ ದಿಗಂತಗಳು’ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮುಖ್ಯ ಭಾಷಣಕಾರರಾಗಿದ್ದರು. ಬಾಲಿವುಡ್ ತಾರೆಗಳಾದ ಸಲ್ಮಾನ್ ಖಾನ್ ಮತ್ತು ಹೇಮಾ ಮಾಲಿನಿ ಸೇರಿದಂತೆ ಭಾರತ ಹಾಗೂ ವಿದೇಶಗಳಿಂದ ಬಂದ ಅನೇಕ ಗಣ್ಯರು ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.

ಆರ್‌ಎಸ್‌ಎಸ್‌ನ ಸ್ಥಾಪನೆ, ಸಂಘಟನೆಯ ಮೂಲ ಚಿಂತನೆ, ದೇಶಭಕ್ತಿ ಹಾಗೂ ಹಿಂದುತ್ವ ಕುರಿತು ಮೋಹನ್ ಭಾಗವತ್ ಅವರು ಭಾಷಣ ಮಾಡಿದರು. ದೇಶವನ್ನು ಶಕ್ತಿಶಾಲಿಯಾಗಿಸಲು ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಸಾಗಬೇಕು; ಯಾರ ಮೇಲೂ ಹೀನಭಾವನೆ ಇಟ್ಟುಕೊಂಡು ಮುಂದುವರಿಯುವುದು ಸಾಧ್ಯವಿಲ್ಲ ಎಂದು ಅವರು ಸಂದೇಶ ನೀಡಿದರು. ಸಾರಿ ವಿಶ್ವದಲ್ಲಿಯೂ ಈ ಸಂಘದಂತೆಯೇ ಕೆಲಸ ಮಾಡುವ ಮತ್ತೊಂದು ಸಂಘಟನೆ ಇಲ್ಲ ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ದೇಶದ ಚಟುವಟಿಕೆಗಳ ಕೇಂದ್ರದಲ್ಲಿ ಸಂಘದ ಹೆಸರು ಕೇಳಿಬರುತ್ತಿರುವುದರಿಂದ, ವಿಶ್ವದ ಐದು ಖಂಡಗಳಿಂದಲೂ ಜನರು ಸಂಘವನ್ನು ನೋಡಲು ಬರುತ್ತಿದ್ದಾರೆ ಎಂದು ಭಾಗವತ್​ ಹೇಳಿದ್ದಾರೆ.

ಸಂಘವನ್ನು ಹತ್ತಿರದಿಂದ ನೋಡಿದ ಮೇಲೆ ವಿದೇಶಗಳಿಂದ ಬಂದ ಹಲವರು ಪ್ರಶ್ನೆಗಳು ಕೇಳುತ್ತಾರೆ. ಆದರೆ ಕೊನೆಗೆ ಅವರ ಎಲ್ಲರ ಪ್ರಶ್ನೆಯೂ ಒಂದೇ ಆಗಿರುತ್ತದೆ. ಅವರು ಯಾವ ದೇಶದಿಂದ ಬಂದವರಾಗಿದ್ದರೂ ಆಫ್ರಿಕಾ, ಯುರೋಪ್, ಅಮೆರಿಕ, ಆಗ್ನೇಯ ಏಷ್ಯಾ ಅಥವಾ ಮಧ್ಯಪ್ರಾಚ್ಯ—ತಮ್ಮ ದೇಶದ ಯುವಕರು ಕೂಡ ಸಂಘದಂತೆ ಸಮಾಜ ಸೇವೆ ಮಾಡಲು ಬಯಸಿದರೆ, ಆ ವಿಧಾನವನ್ನು ಕಲಿಸಬಹುದೇ ಎಂದು ಕೇಳುತ್ತಾರೆ. ಇದರಿಂದ ತಿಳಿಯುವ ಅರ್ಥ ಒಂದೇ: ಸಂಘ ಅನುಸರಿಸುತ್ತಿರುವ ಮಾರ್ಗಕ್ಕಿಂತ ಉತ್ತಮವಾದ ಮತ್ತೊಂದು ಮಾರ್ಗ ಇಲ್ಲ. ಇದೇ ಸರಿಯಾದ ದಾರಿ ಎಂದು ಭಾಗವತ್​ ಹೇಳಿದ್ದಾರೆ.

ಸಂಘವನ್ನು ಅರ್ಥಮಾಡಿಕೊಳ್ಳಲು ಹೋಲಿಕೆ ಮಾಡುವ ಅಗತ್ಯವಿಲ್ಲ, ಏಕೆಂದರೆ ಸಂಘದಂತೆಯೇ ಇನ್ನೊಂದು ಸಂಘವೇ ಇಲ್ಲ. ಆಕಾಶಕ್ಕೆ ಹೋಲಿಕೆ ಆಕಾಶವೇ ಇರುವಂತೆ, ಸಂಘಕ್ಕೂ ಹೋಲಿಕೆ ಸಂಘವೇ ಎಂದು ನಟ ಸಲ್ಮಾನ್ ಖಾನ್​ ಹೇಳಿದ್ದಾರೆ.

ಸಂಘವನ್ನು ಸರಿಯಾಗಿ ತಿಳಿಯಬೇಕಾದರೆ ದೂರದಿಂದ ನೋಡುವುದರಿಂದ ಸಾಲದು, ಒಳಗಿನಿಂದ ಅನುಭವಿಸಬೇಕು. ಸಕ್ಕರೆಯ ರುಚಿ ತಿಳಿಯಲು ಪುಸ್ತಕ ಓದಲು ಅಥವಾ ಭಾಷಣ ಕೇಳಲು ಅಗತ್ಯವಿಲ್ಲ; ಒಂದು ಚಮಚ ಸಕ್ಕರೆ ತಿಂದರೆ ಸಾಕು. ಅದೇ ರೀತಿ, ಸಂಘವನ್ನೂ ಅನುಭವಿಸಿ ತಿಳಿಯಬೇಕು ಎಂದು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಸಂಘವು ಯಾವುದೇ ಪ್ಯಾರಾಮಿಲಿಟರಿ ಸಂಘಟನೆಯೂ ಅಲ್ಲ, ರಾಜಕೀಯ ಪಕ್ಷವೂ ಅಲ್ಲ, ಅಖಾಡಾ ಅಥವಾ ಸಂಗೀತ ಶಾಲೆಯೂ ಅಲ್ಲ. ಹೊರಗಿನಿಂದ ನೋಡಿದರೆ ತಪ್ಪು ಕಲ್ಪನೆ ಬರಬಹುದು. ಸಂಘವು ಯಾರನ್ನಾದರೂ ವಿರೋಧಿಸಲು ಅಥವಾ ಅಧಿಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ‘ಯಾರಿಗೂ ವಿರೋಧವಿಲ್ಲದೆ’ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವುದೇ ಸಂಘದ ಗುರಿ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

ಮೋಹನ್ ಭಾಗವತ್ ಅವರು ಸಮಾಜದ ಮೇಲೆ ಸಿನಿಮಾ ಮತ್ತು ಫ್ಯಾಷನ್‌ನ ಪ್ರಭಾವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಇದ್ದ ಸಲ್ಮಾನ್ ಖಾನ್ ಅವರನ್ನು ಉದ್ದೇಶಿಸಿ ಹಾಸ್ಯವಾಗಿ ಹೇಳಿದ ಅವರು, ಸಲ್ಮಾನ್ ಖಾನ್ ಏನು ಧರಿಸುತ್ತಾರೋ ಅದನ್ನೇ ಶಾಲೆ–ಕಾಲೇಜು ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಏಕೆ ಧರಿಸುತ್ತಿದ್ದಾರೆ ಎಂಬುದನ್ನು ಯೋಚಿಸದೆ, ಕೇವಲ ಅವರು ನಟ ಎಂಬ ಕಾರಣಕ್ಕೆ ಅನುಕರಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.

[t4b-ticker]
error: Content is protected !!