ಪುಣೆ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗುರೆ ಅವಿರೋಧ ಆಯ್ಕೆ | ಉಪಮೇಯರ್ ಆಗಿ ಆರ್‌ಪಿಐ (ಎ) ಪರಶುರಾಮ್ ವಾಡೇಕ‌ರ್ ಅವಿರೋಧವಾಗಿ ಆಯ್ಕೆ

Picture of Savistara

Savistara

Bureau Report

ಪುಣೆ: ಪುಣೆ ಮಹಾನಗರ ಪಾಲಿಕೆಯ (PMC) ನೂತನಮೇಯ‌ರ್ ಆಗಿ ಬಿಜೆಪಿ ಕಾರ್ಪೊರೇಟರ್ ಮಂಜುಷಾ ನಾಗುರೆ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಆರ್‌ಪಿಐ (ಎ) ನಾಯಕ ಪರಶುರಾಮ್‌ ವಾಡೇಕ‌ರ್ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧ ಆಯ್ಕೆ ನಡೆದಿದ್ದು ಹೇಗೆ?: ಮೇಯ‌ರ್ ಸ್ಥಾನಕ್ಕೆಸ್ಪರ್ಧಿಸಿದ್ದ ಎನ್‌ಸಿಪಿಯ ಶೀತಲ್ ಸಾವಂತ್ ಮತ್ತು ಕಾಂಗ್ರೆಸ್ ನಾಯಕಿ ಅಶ್ವಿನಿ ಲಾಂಡ್‌ಗೆ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡರು. ಅದೇ ರೀತಿ, ಉಪಮೇಯರ್ ರೇಸ್‌ನಲ್ಲಿದ್ದ ಎನ್‌ಸಿಪಿ ಕಾರ್ಪೊರೇಟರ್ ದತ್ತಾತ್ರಯ ಬಹಿರತ್ ಮತ್ತು ಕಾಂಗ್ರೆಸ್‌ನ ಸಾಹಿಲ್ ಕೇದಾರಿ ಕೂಡ ಹಿಂದೆ ಸರಿದಿದ್ದರಿಂದ, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆ ಸುಗಮವಾಯಿತು.

ಮಂಜುಷಾ ನಾಗುರೆ: ಸಿಂಹಗಡ ಪ್ರದೇಶದ ಕಾರ್ಪೊರೇಟ‌ರ್ಆಗಿರುವ ಇವರು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ನಿಕಟ ಸಂಬಂಧ ಹೊಂದಿದ್ದಾರೆ.

ಪರಶುರಾಮ್ ವಾಡೇಕರ್: ರಿಪಬ್ಲಿಕನ್ ಪಾರ್ಟಿ ಆಫ್ಇಂಡಿಯಾ (ಅಠಾವಳೆ) ನಾಯಕರಾದ ಇವರು, ಬೋಪೋಡಿ ಭಾಗದಿಂದ ಬಿಜೆಪಿ ಮೈತ್ರಿಕೂಟದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.

ಪಾಲಿಕೆಯ ಬಲಾಬಲ: ಒಟ್ಟು 165 ಸದಸ್ಯ ಬಲದ ಪುಣೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು 119 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಅಜಿತ್‌ ಪವಾ‌ರ್ ಮತ್ತು ಶರದ್ ಪವಾ‌ರ್ ನೇತೃತ್ವದ ಎನ್‌ಸಿಪಿ ಬಣಗಳು ಒಟ್ಟಾಗಿ 30 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 15 ಮತ್ತು ಶಿವಸೇನೆ (ಯುಬಿಟಿ) ಕೇವಲ 1 ಸ್ಥಾನ ಪಡೆದಿವೆ.

ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹಾಗೂ ಪುಣೆ ಸಂಸದ ಮುರಳೀಧರ್ ಮೊಹೋಲ್, “ನಗರದ ಜನತೆ ಬಿಜೆಪಿಗೆ ನೀಡಿರುವ ಭರ್ಜರಿ ಬಹುಮತದ ಫಲವಾಗಿ ಇಂದು ನಮ್ಮ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!