ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಜೋಸೆಫ್ ವಿಜಯ್ ನಟನೆಯ ‘ಜನ ನಾಯಗನ್’ ಸುಮಾರು ಏಳು ತಿಂಗಳ ಕಾಯುವಿಕೆಯ ನಂತರ ತೆರೆಗೆ ಬರಲು ಸಜ್ಜಾಗಿದೆ. ಜುಲೈ 23ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ನೆಚ್ಚಿನ ನಟನನ್ನು ಪರದೆ ಮೇಲೆ ಕಣ್ಣುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಈ ಸಿನಿಮಾ ಮೇಲಿರುವ ನಿರೀಕ್ಷೆಯ ನಡುವೆಯೇ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಟಿಕೆಟ್ ಬೆಲೆ ₹2500 ತಲುಪಿದ್ದರೂ ಬುಕಿಂಗ್ ಆಗುತ್ತಲೇ ಇದೆ ಎಂದು ವರದಿಯಾಗಿದೆ. ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಮತ್ತು ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಬುಕಿಂಗ್ ನಡೆಯುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಗಗನಕ್ಕೇರಿದ ಟಿಕೆಟ್ ದರ
48ವಿಶ್ವದಾದ್ಯಂತ ಸುಮಾರು 30 ದೇಶಗಳ ₹7,000 ರಿಂದ ₹8,000 ಸ್ಟ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ವಿದೇಶಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಜೋರಾಗಿದೆ. ಬೆಂಗಳೂರಿನಲ್ಲಿ ಜನ ನಾಯಗನ್ ಸಿನಿಮಾ ಟಿಕೆಟ್ ದರಗಳು ಕನಿಷ್ಠ ₹800ರಿಂದ ಆರಂಭವಾಗಿ ಐಷಾರಾಮಿ ರೆಕ್ಸೆನರ್ ಸೀಟುಗಳಿಗೆ ಗರಿಷ್ಠ ₹2,500 ರವರೆಗೆ ಮಾರಾಟವಾಗುತ್ತಿವೆ. ಅದಾಗ್ಯೂ, ಹೆಚ್ಚಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ₹1,000ದಿಂದ ₹1,700ರ ಆಸುಪಾಸಿನಲ್ಲಿದೆ. ಈಗಾಗಲೇ ಕೋರಮಂಗಲದಲ್ಲಿರುವ ನೆಕ್ಸಸ್ ಮಾಲ್‌ನಲ್ಲಿ ₹1,200ರಿಂದ ₹2,400 ರವರೆಗೆ ಟಿಕೆಟ್‌ಗಳು ಮಾರಾಟವಾಗಿವೆ.
ಎಚ್. ವಿನೋತ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಜನ ನಾಯಗನ್’ ಸಿನಿಮಾದಲ್ಲಿ ನಟ ವಿಜಯ್ ಜೊತೆಗೆ ಮಮಿತಾ ಬೈಜು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


















































