ಜನ ನಾಯಗನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ದಾಖಲೆ

Picture of Savistara

Savistara

Bureau Report

ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಜೋಸೆಫ್‌ ನಟನೆಯ ಕೊನೆಯ ಚಿತ್ರ ಎಂದೇ ಚರ್ಚೆಗೆ ಗ್ರಾಸವಾಗಿರುವ ‘ಜನ ನಾಯಗನ್’ ಬಿಡುಗಡೆಗೆ ವೇದಿಕೆ ಸಿದ್ಧವಾಗಿದ್ದು, ಟಿಕೆಟ್‌ಗಳ ಮುಂಗಡ ಬುಕಿಂಗ್‌ನಲ್ಲೇ ಹೊಸ ದಾಖಲೆ ಬರೆದಿದೆ.

ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಂದ ‘ಜನ ನಾಯಗನ್’ ಕುತೂಹಲ ಮೂಡಿಸಿದೆ. ಆರಂಭದಲ್ಲಿ ಎದುರಾದ ತೊಡಕುಗಳು, ಚುನಾವಣೆ ಸಂದರ್ಭದಲ್ಲಿ ನಡೆದ ಚರ್ಚೆಗಳು, ಚಿತ್ರದ ಪ್ರಚಾರ ಸಾಮಗ್ರಿಗಳು ಹಾಗೂ ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆ ಚಿತ್ರ ಹೆಚ್ಚು ಗಮನ ಸೆಳೆದಿವೆ.ಚಿತ್ರ ಜುಲೈ 23 (ಗುರುವಾರ)ರಂದು 30 ದೇಶಗಳ 8 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳುನಾಡಿನಲ್ಲಿಯೇ ನಿತ್ಯ ಸುಮಾರು 3,500 ಪ್ರದರ್ಶನಗಳನ್ನು ಹೊಂದಿದೆ.’ಸುಮಾರು 90 ಸಾವಿರ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ. ಚೆನ್ನೈನ ಕಮಲಾ ಚಿತ್ರಮಂದಿರದಲ್ಲೇ 10 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ’ ಎಂದು ತಮಿಳುನಾಡು ಚಿತ್ರಮಂದಿರ ಮಾಲೀಕರ ಸಂಘ ತಿಳಿಸಿದೆ.ಚಿತ್ರದ ಅವಧಿ 3 ಗಂಟೆ 3 ನಿಮಿಷಗಳಾಗಿದ್ದು, ಜುಲೈ 19ರಿಂದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಆರಂಭವಾಗಿತ್ತು. ರಾಜ್ಯ ಸರ್ಕಾರ ಟಿಕೆಟ್‌ನ ಗರಿಷ್ಠ ದರವನ್ನು ₹190ಕ್ಕೆ ನಿಗದಿಪಡಿಸಿದ್ದರೂ, ಕೆಲವು ಕಡೆಗಳಲ್ಲಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ವರದಿಗಳಿವೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನವೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದರೂ, ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಎಂಬ ಪದವನ್ನು ಸೇರಿಸಲಾಗಿದೆ ಎಂದು ನಿರ್ಮಾಪಕ ವೆಂಕಟ್ ಕೆ.ನಾರಾಯಣ ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ಸುಮಾರು ಏಳು ತಿಂಗಳು ವಿಳಂಬವಾಗಿದ್ದು, ಈ ಅವಧಿಯಲ್ಲಿ ಹೊಸ ಹಾಡು ಹಾಗೂ ಕೆಲವು ದೃಶ್ಯಗಳನ್ನು ಸೇರಿಸಿ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.20 ಸೆಕೆಂಡ್‌ಗಳ ದೃಶ್ಯಗಳ ತೆಗೆಯಲು, 10 ಸೆಕೆಂಡ್‌ಗಳ ದೃಶ್ಯದಲ್ಲಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಧಾರ್ಮಿಕ ಪ್ರಸ್ತಾಪವಿರುವ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ.ಎಚ್. ವಿನೋದ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ ರವಿಚಂರ್ದ ಸಂಗೀತ ನಿರ್ದೇಶನ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಸಂಕಲನವಿದೆ. ಚಿತ್ರವು ಹಿಂದಿಯಲ್ಲಿ ‘ಜನೇತಾ’, ತೆಲುಗಿನಲ್ಲಿ ‘ಜನಯಾಕು’ ಹಾಗೂ ಕನ್ನಡದಲ್ಲಿ ‘ಜನಾಯಕ್‌’ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!