ಚೆನ್ನೈ: ಟಿವಿಕೆ ನೇತೃತ್ವದ ತಮಿಳುನಾಡಿನ ಆಡಳಿತರೂಢ ಮೈತ್ರಿಕೂಟಕ್ಕೆ ‘ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಅಲಾಯನ್ಸ್’ (ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ) ಎಂದು ಹೆಸರಿಡಲಾಗಿದೆ.
ಬುಧವಾರ ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ಜೋಸೆಫ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೈತ್ರಿಕೂಟದ ಮಿತ್ರಪಕ್ಷಗಳ ಸಭೆಯಲ್ಲಿ ಈ ಹೆಸರನ್ನು ಅಂತಿಮಗೊಳಿಸಲಾಯಿತು. ಒಕ್ಕೂಟಕ್ಕೆ ಅಧಿಕೃತ ಹೆಸರು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು.ಟಿವಿಕೆ ಜೊತೆಗೆ ಕಾಂಗ್ರೆಸ್, ವಿಸಿಕೆ, ಐಯುಎಂಎಲ್, ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳು ಮೈತ್ರಿಕೂಟದ ಭಾಗವಾಗಿವೆ.ಆದರೆ, ಪಣೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಿಂದ ಸಿಪಿಐ(ಎಂ) ಮತ್ತು ಸಿಪಿಐ ದೂರ ಉಳಿದಿದ್ದವು.
ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ. ಮಾಣಿಕ್ಕಂ ಠಾಗೋರ್ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿ ಸಭೆಯಲ್ಲಿ ಭಾಗವಹಿಸಿದ್ದರು.
















































