ಸುಬ್ರಹ್ಮಣ್ಯ :ಆಶ್ಲೇಷ ಬಲಿ ಸೇವೆ: ಶೃಂಗೇರಿ ಮಠದಲ್ಲೇ ಸಾಮೂಹಿಕ ಸಂಕಲ್ಪ – ನೂಕುನುಗ್ಗಲು ತಡೆಯಲು ಕುಕ್ಕೆ ದೇವಸ್ಥಾನ ಸಮಿತಿಯಿಂದ ಹೊಸ ಕ್ರಮ!

Picture of Savistara

Savistara

Bureau Report

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆ ನೆರವೇರಿಸುವ ಭಕ್ತಾದಿಗಳಿಗೆ ಈಗ ಸೇವೆ ನಡೆಯುವ ಶೃಂಗೇರಿ ಮಠದ ಆವರಣದಲ್ಲೇ ಸಾಮೂಹಿಕ ಸಂಕಲ್ಪ ಮಾಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
​ಈ ಹಿಂದೆ ಭಕ್ತಾದಿಗಳು ಆಶ್ಲೇಷ ಬಲಿ ಮತ್ತು ನಾಗ ಪ್ರತಿಷ್ಠೆ ಸೇವೆಗಳಿಗೆ ಸಂಕಲ್ಪ ಮಂದಿರದಲ್ಲಿ ಪ್ರತ್ಯೇಕವಾಗಿ ಸರದಿಯಲ್ಲಿ ನಿಂತು ಸಂಕಲ್ಪ ಮಾಡಿಸಬೇಕಿತ್ತು. ಆದರೆ ಪ್ರತ್ಯೇಕ ಸಂಕಲ್ಪದ ವೇಳೆ ತೀವ್ರ ನೂಕುನುಗ್ಗಲು ಉಂಟಾಗಿ, ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಕ್ತರಿಂದ ಬಂದ ದೂರುಗಳು ಹಾಗೂ ಅನುಕೂಲವನ್ನು ಪರಿಗಣಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಸಾಮೂಹಿಕ ಸಂಕಲ್ಪ ನೆರವೇರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಸ್ತುತ, ಪೂಜೆ ನಡೆಯುವ ಸ್ಥಳದಲ್ಲೇ (ಶೃಂಗೇರಿ ಮಠ) ಎಲ್ಲಾ ಭಕ್ತರಿಗೆ ಒಟ್ಟಿಗೆ ಸಾಮೂಹಿಕವಾಗಿ ಸಂಕಲ್ಪ ಮಾಡಿಸಲಾಗುತ್ತಿದ್ದು, ಇದರಿಂದ ಭಕ್ತಾದಿಗಳ ಸಮಯ ಉಳಿತಾಯವಾಗುವುದಲ್ಲದೆ ಸುಲಭವಾಗಿ ಸೇವೆ ನೆರವೇರಿಸಲು ಹಾದಿ ಸುಗಮವಾಗಿದೆ.

[t4b-ticker]
error: Content is protected !!