ಸುಳ್ಯ “ವಿಶ್ವ ನಾಯಕ ಮೋದಿ” ಬೀದಿ ನಾಟಕ ಎರಡನೇ ಹಂತ ಯಶಸ್ವಿ |ಮೆಚ್ಚುಗೆ ಗಳಿಸಿದ ನಾಟಕ ಪ್ರದರ್ಶನ

Picture of Savistara

Savistara

Bureau Report

ಸುಳ್ಯ :ರಾಷ್ಟ್ರ ಮಟ್ಟದಲ್ಲಿ ಒಂದು ತಿಂಗಳ ಕಾಲ ಬಿಜೆಪಿ ಸೇವಾ ಪಾಕ್ಷಿಕದ ಅಂಗವಾಗಿ ಹಮ್ಮಿಕೊಂಡಿರುವ ‘ವಿಶ್ವ ನಾಯಕ ನರೇಂದ್ರ ಮೋದಿ’ ಬೀದಿ ನಾಟಕ ಪ್ರಥಮ ಹಂತದಲ್ಲಿ ಕಡಬ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದಿದೆ.ನಿನ್ನೆ (ಅ.24) ಜಾಲ್ಸೂರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಅಲೆಟ್ಟಿ, ಅಜ್ಜಾವರ, ಮಂಡೆಕೋಲು, ಜಾಲ್ಸೂರು, ಕನಕಮಜಲು ಮತ್ತು ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಐವರ್ನಾಡು ಗ್ರಾಮಗಳಲ್ಲಿ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆದು ಬಂದ ದಾರಿ ಹಾಗೂ ದೇಶದಲ್ಲಿ ನಡೆದ ಬದಲಾವಣೆಯ ಪರ್ವದ ಬಗ್ಗೆ ನಾಟಕದಲ್ಲಿ ಮುಖ್ಯವಾಗಿ ಬೆಳಕು ಚೆಲ್ಲಲಾಯಿತು.

ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಮಹಾಶಕ್ತಿ ಕೇಂದ್ರ ಪ್ರಮುಖರಾದ ಸುದರ್ಶನ್ ಪಾತಿಕಲ್ಲು, ಹೇಮಂತ್ ಮಠ, ರಾಜೇಶ್ ಶೆಟ್ಟಿ ಮೇನಾಲ,ಸುಧಾಕರ ಕಾಮತ್, ಜಯರಾಮ್ ರೈ, ಗೋಪಾಲಕೃಷ್ಣ ಭಟ್,ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೆಟ್ಟಿ,ಈಶ್ವರ ಕೊರoಬಡ್ಕ,ಗುಣವತಿ ಕೊಲ್ಲಂತಡ್ಕ,

ವಿನುತಾ ಪಾತಿಕಲ್ಲು, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಕಿಶನ್ ಜಬಳೆ, ನಂದಕುಮಾರ್ ಬಾರೆತ್ತಡ್ಕ, ಕೃಷ್ಣಪ್ರಸಾದ್ ಮಡ್ತಿಲ, ಶ್ರೀನಿವಾಸ್ ಮಡ್ತಿಲ, ಮೋಹನ್ ಸೇರಿದಂತೆ ಪ್ರತಿ ಗ್ರಾಮದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಲಾವಿದರು: ಈ ಬೀದಿ ನಾಟಕದ ರಚನೆಯನ್ನು ಕುಸುಮಾಧರ ಎ.ಟಿ. ಮಾಡಿದ್ದು, ನಿರ್ದೇಶನವನ್ನು ಕುಸುಮಾಧರ ಎ.ಟಿ. ಮತ್ತು ರಾಜ್ ಮುಖೇಶ್ ಸುಳ್ಯ ನಿರ್ವಹಿಸಿದ್ದಾರೆ. ಹಾಡುಗಳ ಸಂಯೋಜನೆ ರಾಜ್ ಮುಖೇಶ್ ಅವರದ್ದು.ನಾಟಕದಲ್ಲಿ ಕುಸುಮಾಧರ ಎ.ಟಿ.,

ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ, ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಸುಳ್ಯ ಮಂಡಲ ವ್ಯಾಪ್ತಿಯಲ್ಲಿ ಈವರೆಗೆ ನಡೆದ ಬೀದಿ ನಾಟಕಕ್ಕೆ ಬಿಜೆಪಿ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

[t4b-ticker]
error: Content is protected !!