ಬೆಂಗಳೂರು: ದೀಪಾವಳಿ ಹಾಗೂ ಧನ್‌ತೇರಸ್ ಹಬ್ಬದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಹಬ್ಬ ಹಾಗೂ ಮದುವೆ ಸೀಸನ್‌ಗಾಗಿ ಖರೀದಿ ಮಾಡಲು ಕಾಯುತ್ತಿದ್ದ ಗ್ರಾಹಕರಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಅಕ್ಟೋಬರ್‌ನಲ್ಲಿ ಎಷ್ಟಾಗಿದೆ ಇಳಿಕೆ?
24 ಕ್ಯಾರೆಟ್ (ಅಪರಂಜಿ ಚಿನ್ನ): ಅಕ್ಟೋಬರ್ 1ರಂದು ಪ್ರತಿ ಗ್ರಾಂಗೆ ₹14,924 ಇದ್ದ ಬೆಲೆ ಅಕ್ಟೋಬರ್ 24ರ ವೇಳೆಗೆ ₹14,258ಕ್ಕೆ ತಗ್ಗಿದೆ. ಅಂದರೆ ಪ್ರತಿ ಗ್ರಾಂಗೆ ಸುಮಾರು ₹666 ಕಡಿಮೆಯಾಗಿದೆ.22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ ಗ್ರಾಂಗೆ ₹13,680 ರಿಂದ ₹13,070ಕ್ಕೆ ಇಳಿಕೆಯಾಗಿದ್ದು, ಗ್ರಾಂಗೆ ₹610 ತಗ್ಗಿದೆ.
ಕಳೆದ 10 ದಿನಗಳಲ್ಲಿ ಶೇಕಡಾ 4.46% ರಷ್ಟು ದರ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಖರೀದಿಯಲ್ಲಿ ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯವಾಗುತ್ತಿದೆ.
ಬೆಲೆ ಇಳಿಕೆಗೆ ಅಸಲಿ ಕಾರಣಗಳೇನು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಬಲಗೊಂಡಿರುವುದು, ಜಾಗತಿಕ ಉದ್ವಿಗ್ನತೆ ಕೊಂಚ ತಗ್ಗಿರುವುದು ಹಾಗೂ ಹೂಡಿಕೆದಾರರು ‘ಪ್ರಾಫಿಟ್ ಬುಕ್ಕಿಂಗ್’ (ಲಾಭ ಗಳಿಕೆ) ಉದ್ದೇಶದಿಂದ ಗೋಲ್ಡ್ ಇಟಿಎಫ್‌ಗಳನ್ನು ಮಾರಾಟ ಮಾಡಿರುವುದು ಚಿನ್ನದ ದರ ತಗ್ಗಲು ಪ್ರಮುಖ ಕಾರಣಗಳಾಗಿವೆ.
ಮಾರುಕಟ್ಟೆ ತಜ್ಞರ ಪ್ರಕಾರ ಈ ದರ ಇಳಿಕೆ ತಾತ್ಕಾಲಿಕವಾಗಿದ್ದು, ದೀಪಾವಳಿಯ ನಂತರ ಮದುವೆ ಸೀಸನ್ ಬೇಡಿಕೆ ಹೆಚ್ಚುತ್ತಿದ್ದಂತೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹಬ್ಬದ ಖರೀದಿಗೆ ಚಿನ್ನದ ಮಳಿಗೆಗಳಲ್ಲಿ ಮುಂಗಡ ಬುಕ್ಕಿಂಗ್ ತೀವ್ರಗೊಂಡಿದೆ.












































