ಗೆದ್ದರೂ ಭಾರತ ತಂಡಕ್ಕೆ ಸಿಗದ ಏಷ್ಯಾ ಕಪ್‌ ಟ್ರೋಫಿ! ತಡರಾತ್ರಿ ದುಬೈನಲ್ಲಿ ನಡೆದಿದ್ದೇನು?

Picture of Savistara

Savistara

Bureau Report

ದುಬೈ (ಸೆ.29): ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿತು. ಏಷ್ಯಾ ಕಪ್‌ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವ್ರಿಂದ ಟ್ರೋಫಿ ಸ್ವೀಕರಿಸಲು ಭಾರತದ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡಲಿಲ್ಲ.

ಮೊಹ್ಸಿನ್ ನಖ್ವಿ ಕೈಯಿಂದ ಕಪ್​ ಪಡೆದ ತಂಡ

ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನ ಸ್ವೀಕರಿಸಲು ಭಾರತೀಯ ಕ್ರಿಕೆಟ್ ತಂಡ ನಿರಾಕರಿಸಿತು. ಪಂದ್ಯದ ನಂತರದ ಪ್ರದಾನ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೆ ನಖ್ವಿ ವೇದಿಕೆ ಏರಿ ನಿಂತಿದ್ದರು. ಆದ್ರೆ ಸಮಾರಂಭಕ್ಕೆ ಟೀಮ್ ಇಂಡಿಯಾ ಆಟಗಾರರು ಆಗಮಿಸಲಿಲ್ಲ, ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ವಿಳಂಬವಾಯಿತು.

ಭಾರತದ ಉದ್ದೇಶ ಏನಾಗಿತ್ತು?

ಫೈನಲ್‌ಗೆ ಮೊದಲೇ, ಭಾರತೀಯ ಆಟಗಾರರು ಗೆದ್ರೆ ನಖ್ವಿ ಅವ್ರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂಬ ಚರ್ಚೆ ನಡೆದಿತ್ತು. ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಹಾಗೂ ಪಾಕ್​ ಗೃಹ ಸಚಿವರಾಗಿದ್ದಾರೆ. ACC ಅಧ್ಯಕ್ಷರಾಗಿ ವಿಜೇತ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಬೇಕಾಗಿತ್ತು ಮತ್ತು ಎರಡೂ ತಂಡಗಳೊಂದಿಗೆ ಕೈಕುಲುಕಬೇಕಾಗಿತ್ತು. ಆದ್ರೆ ಭಾರತೀಯ ತಂಡವು ಪಾಕಿಸ್ತಾನದ ಯಾರೊಂದಿಗೂ ಕೈಕುಲುಕಬಾರದು ಅಥವಾ ಯಾವುದೇ ಮೈದಾನದ ಹೊರಗೆ ಸಂವಹನಗಳಲ್ಲಿ ತೊಡಗಬಾರದು ಎಂದುಕೊಂಡ ಹಿನ್ನೆಲೆ ನಖ್ವಿ ಕೈಯಲ್ಲಿ ಕಪ್​ ಸ್ವೀಕರಿಸಲು ಒಪ್ಪಲಿಲ್ಲ.

ಭಾರತದ ವಿರುದ್ಧ ವಿಷ ಕಾರುತ್ತಿರುವ ನಖ್ವಿ

ಭಾರತದ ವಿರುದ್ಧ ವಿಷ ಕಾರುತ್ತಿದ್ದ ಮೊಹ್ಸಿನ್ ನಖ್ವಿ ಅವ್ರಿಂದ ಟ್ರೋಫಿಯನ್ನ ಸ್ವೀಕರಿಸದಿರಲು ಭಾರತ ತಂಡ ಈಗಾಗಲೇ ದೃಢ ನಿರ್ಧಾರ ತೆಗೆದುಕೊಂಡಿತ್ತು. ಹಾಗೆಯೇ ಮಾಡಿದೆ. ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆಗಳ ಕಾಲ ವಿಳಂಬವಾಯಿತು. ಪಂದ್ಯ ಮಧ್ಯರಾತ್ರಿ ಕೊನೆಗೊಂಡಿತು, ಕಾರ್ಯಕ್ರಮ ತೊರೆದು ನಖ್ವಿ ಹೋಟೆಲ್ ರೂಮ್​ಗೆ ತೆರಳಿದ್ರು.

ಟ್ರೋಫಿ ಇಲ್ಲದೆ ಸಂಭ್ರಮಿಸಿದ ಭಾರತ

ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಸಂಘಟಕರು ಇದ್ದಕ್ಕಿದ್ದಂತೆ ಟ್ರೋಫಿಯನ್ನು ವೇದಿಕೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ತೆಗೆದುಕೊಂಡು ಹೋದರು. ಕ್ರಿಕೆಟ್ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡದೆ ಇರುವ ಘಟನೆ ನಡೆದಿದೆ. ಟ್ರೋಫಿ ಇಲ್ಲದೆ ಟೀ ಇಂಡಿಯಾ ಆಟಗಾರರು ಸಂಭ್ರಮಿಸಿದ್ರು.

ಕ್ರಿಸ್ಟಿಯಾನೊ ರೊನಾಲ್ಡೊ ವಿಮಾನ ಅಪಘಾತದ ಸನ್ನೆ ಮಾಡುವ ಮೂಲಕ ಗೋಲು ಗಳಿಸಿ ಸಂಭ್ರಮಿಸುತ್ತಿರುವ ವೀಡಿಯೊವನ್ನು ನಖ್ವಿ ಇತ್ತೀಚೆಗೆ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 21 ರಂದು ಭಾರತ ವಿರುದ್ಧದ ಸೂಪರ್ 4 ಪಂದ್ಯದ ಸಂದರ್ಭದಲ್ಲಿ ವಿವಾದಾತ್ಮಕ ಪಾಕಿಸ್ತಾನಿ ವೇಗಿ ಹ್ಯಾರಿಸ್ ರೌಫ್ ಕೂಡ ಅದೇ ಪ್ರಚೋದನಕಾರಿ ಸನ್ನೆಯನ್ನು ಮಾಡಿದರು, ಇದಕ್ಕಾಗಿ ಅವರಿಗೆ ದಂಡ ವಿಧಿಸಲಾಯಿತು.

[t4b-ticker]
error: Content is protected !!