ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ FIR ದಾಖಲು ಕೇಪು ಕೋಳಿ ಅಂಕ ಪ್ರಕರಣ

Picture of Savistara

Savistara

Bureau Report

ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಕೇಸ್​ಕೋಳಿ‌ ಕಾಳಗಕ್ಕೆ ಪೊಲೀಸರು ‌ನಿರ್ಬಂಧ ಹೇರಿದ್ರೂ, ಪುತ್ತೂರು ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.22 ಹುಂಜ ಹಾಗೂ ಕೋಳಿ ವಶಕ್ಕೆಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಳಿ ಅಂಕಕ್ಕೆ ತಂದಿದ್ದ 22 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿ)ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾತ್ರೋತ್ಸವದ ಪ್ರಯುಕ್ತ ಕೋಳಿ ಕಾಳಗಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಊರಿನವರು ಕೋಳಿ ಅಂಕವನ್ನು ಆಯೋಜಿಸಿದ್ದರು. ಇಲ್ಲಿ ಕೋಳಿ ಅಂಕ ಮಾಡುವಂತಿಲ್ಲ. ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಆದ್ರೂ ಶಾಸಕರ ನೇತೃತ್ವದಲ್ಲಿ ಕೋಳಿ ಕಾಳಗ ನಡೆದಿದೆ ಎನ್ನಲಾಗ್ತಿದೆ.ವರ್ಷಕ್ಕೊಮ್ಮೆ ನಡೆಯೋ ಕೋಳಿ‌ ಅಂಕ!ಕಾನೂನು ಬಾಹಿರ ಕೃತ್ಯ ದಲ್ಲಿತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ದ ಪ್ರಕರಣ ದಾಖಲು BNS ಕಲಂ:189(2), 49, 221, 223, 190 PREVENTION OF CRUELTY TO ANIMALS ACT, 1960 ಅಡಿ ಪ್ರಕರಣ ದಾಖಲಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಪುವಿನಲ್ಲಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಈ ಕೋಳಿ‌ ಅಂಕ ನಡೆಸಲಾಗುತ್ತೆ. ಯಾವುದೇ ಜೂಜು ಕಟ್ಟದೆ ಧಾರ್ಮಿಕ ಹಿನ್ನೆಲೆ ಆಧಾರದಲ್ಲಿ ಕೋಳಿ‌ ಅಂಕ ನಡೆಯುತ್ತದೆ.

[t4b-ticker]
error: Content is protected !!