ನವದೆಹಲಿ: ಈ ತಿಂಗಳ ಆರಂಭದಲ್ಲಿ ದೇಶಿಯ ವಿಮಾನಯಾನ ಪ್ರಯಾಣದಲ್ಲಿ ಇಂಡಿಗೋ ವಿಮಾಯಾನಗಳು ಅವ್ಯವಸ್ಥೆ ಸೃಷ್ಟಿಸಿದ ಬಳಿಕ ದೇಶಿಯ ವಿಮಾನಯಾನ ಮಾರುಕಟ್ಟೆಯಲ್ಲಿ ಮತ್ತೆ ಮೂರು ಹೊಸ ಏರ್ಲೈನ್ಸ್ಗೆ(three new airlines) ಸೇವೆ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಶಂಖ್ ಏರ್, ಅಲ್ ಹಿಂದ್ ಏರ್ ಹಾಗೂ ಫ್ಲೈಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಗಳು ಮಾರುಕಟ್ಟೆಯಲ್ಲಿ ತಮ್ಮ ವಿಮಾನಗಳ ಹಾರಟಕ್ಕೆ ಕೇಂದ್ರದಿಮದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆದಿವೆ. ಶಂಕ್ ಏರ್ ಈ ಹಿಂದೆಯೇ ಅನುಪತಿ ಪಡೆದಿದ್ರೆ, ಉಳಿದ ಎರಡು ಸಂಸ್ಥೆಗಳು ಈ ವಾರ ಎನ್‌ಒಸಿ ಪಡೆದಿವೆ. ಇಂಡಿಗೋ ವಿಮಾನದ ಸೇವೆಯಲ್ಲಿ ಉಂಟಾದ ಅಡಚಣೆಗೆ ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಸರ್ಕಾರ ಏಕಸ್ವಾಮ್ಯ ಹೊಂದಿದೆ ಎಂಬ ಆರೋಪ ಕೇಳಿಬಂದು ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಆರೋಪದಿಂದ ಹೊರಬರಲು ಮತ್ತು ಕಾರ್ಯಾಚರಣೆ ನಡೆಸಲು ಬಯಸುವ ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಶಂಖ್ ಏರ್ ಈಗಾಗಲೇ ಸಚಿವಾಲಯದಿಂದ NOC ಪಡೆದಿದ್ದರೆ, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಈ ವಾರ ತಮ್ಮ NOC ಗಳನ್ನು ಪಡೆದಿವೆ. ಪ್ರಧಾನಿ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತೀಯ ವಿಮಾನಯಾನದಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಸಚಿವಾಲಯದ ಪ್ರಯತ್ನವಾಗಿದೆ. ಉಡಾನ್‌ನಂತಹ ಯೋಜನೆಗಳು, ಸಣ್ಣ ವಿಮಾನಯಾನ ಸಂಸ್ಥೆಗಳಾದ ಸ್ಟಾರ್ ಏರ್, ಇಂಡಿಯಾ ಒನ್ ಏರ್, ಫ್ಲೈ91 ಇತ್ಯಾದಿಗಳು ದೇಶದೊಳಗಿನ ಪ್ರಾದೇಶಿಕ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಟ್ಟಿವೆ ಎಂದು ತಿಳಿಸಿದ್ದಾರೆ













































