ಕೇರಳದಲ್ಲಿ ₹332 ಕೋಟಿ ಮೌಲ್ಯದ ಮದ್ಯ ಮಾರಾಟ ದಾಖಲೆ

Picture of Savistara

Savistara

Bureau Report

ಕೊಚ್ಚಿ: ಕೇರಳದಲ್ಲಿ ಕ್ರಿಸ್‌ ಮಸ್ ಆಚರಣೆ ಸಂಭ್ರಮ ದಿಂದ ನಡೆಯುತ್ತಿದ್ದು, ಕೇರಳ ರಾಜ್ಯ ಪಾನೀಯ ನಿಗಮ (ಕೆಎಸ್‌ ಬಿಸಿ) ಹಬ್ಬದ ಋತುವಿನ ಮೊದಲ ನಾಲ್ಕು ದಿನಗಳಲ್ಲಿ ತನ್ನ ಮಳಿಗೆಗಳ ಮೂಲಕ 332.62 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಾಲ್ಕು ದಿನಗಳ ಅವಧಿಯಲ್ಲಿ ಕೆಎಸ್‌ಬಿಸಿ ಮದ್ಯದ ಅಂಗಡಿಗಳು ಮತ್ತು ಗೋದಾಮುಗಳ ಮೂಲಕ 332.62 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 18.99 ರಷ್ಟು ಹೆಚ್ಚಳವಾಗಿದೆ, ಆಗ ಮಾರಾಟವು 229.54 ಕೋಟಿ ರೂ. ಆಗಿತ್ತು. ಡಿಸೆಂಬರ್24 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದು, 114.45 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿದೆ.ಕೆಎಸ್‌ಬಿಸಿ ಡಿಸೆಂಬರ್22 ರಿಂದ 31 ರವರೆಗಿನ ಅವಧಿಯನ್ನು ಕ್ರಿಸ್‌ಮಸ್‌ ಹೊಸ ವರ್ಷದ ಹಬ್ಬರ ಋತು ಎಂದು ಪರಿಗಣಿಸುತ್ತದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!