ಬೆಂಗಳೂರು: ನಿದ್ರೆ ಮಾಡುವಾಗ ಬೆವರುವುದು ಸಾಮಾನ್ಯವಾಗಿ ಹಲವರಲ್ಲಿ ಕಂಡುಬರುವ ಸಮಸ್ಯೆ. ಕೊಠಡಿ ಬಿಸಿಯಾಗಿದ್ದಾಗ ಅಥವಾ ಹೆಚ್ಚು ಕಂಬಳಿ ಹೊದ್ದಾಗ ಬೆವರುವುದು ಸಹಜ. ಆದರೆ ಹವಾಮಾನ ತಂಪಾಗಿದ್ದರೂ, ಫ್ಯಾನ್ ಅಥವಾ ಎಸಿ ಚಾಲನೆಯಲ್ಲಿದ್ದರೂ ರಾತ್ರಿ ವೇಳೆ ಪದೇ ಪದೇ ಬೆವರುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬಾರದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ರಾತ್ರಿ ಬೆವರಲು ಪ್ರಮುಖ ಕಾರಣಗಳು:
ಥೈರಾಯ್ಡ್ ಸಮಸ್ಯೆ (Hyperthyroidism): ಥೈರಾಯ್ಡ್ ಗ್ರಂಥಿ ಅತಿಯಾಗಿ ಕೆಲಸ ಮಾಡಿದಾಗ ದೇಹದ ತಾಪಮಾನ ನಿಯಂತ್ರಣ ತಪ್ಪಿ ನಿದ್ರೆಯಲ್ಲಿ ಅತಿಯಾಗಿ ಬೆವರು ಬರಲು ಕಾರಣವಾಗುತ್ತದೆ ಎಂದು ಶ್ವಾಸಕೋಶ ತಜ್ಞ ಡಾ. ನಿಕ್ ವಿಲ್ಲಾ ಲೋಬೋಸ್ ತಿಳಿಸಿದ್ದಾರೆ.
ಮಾನಸಿಕ ಒತ್ತಡ ಹಾಗೂ ಆತಂಕ: ಅತಿಯಾದ ಒತ್ತಡದಲ್ಲಿದ್ದಾಗ ಹೃದಯ ಬಡಿತ ಹೆಚ್ಚಿ ಸ್ನಾಯುಗಳು ಬಿಗಿಯಾಗುವುದರಿಂದ ನಿದ್ರೆಯಲ್ಲೂ ಬೆವರು ಸುರಿಯುತ್ತದೆ.ಋತುಬಂಧ (Menopause): 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಮೆನೋಪಾಸ್ ಹಂತ ತಲುಪುವಾಗ ಮುಖ ಹಾಗೂ ಎದೆಭಾಗದಲ್ಲಿ ದಿಢೀರ್ ಬಿಸಿ ಭಾಸವಾಗಿ (Hot Flashes) ಬೆವರು ಬರುತ್ತದೆ.
ಔಷಧಿಗಳ ಅಡ್ಡಪರಿಣಾಮ: ಖಿನ್ನತೆ ಶಮನಕಾರಿ ಮಾತ್ರೆಗಳು, ಸಕ್ಕರೆ ಕಾಯಿಲೆ, ಬಿಪಿ, ಸ್ಟೀರಾಯ್ಡ್ ಹಾಗೂ ಪ್ಯಾರಾಸಿಟಮಾಲ್ ಮಾತ್ರೆಗಳ ಬಳಕೆಯಿಂದಲೂ ನಿದ್ರೆಯಲ್ಲಿ ಬೆವರು ಬರಬಹುದು.ತಡೆಯಲು ಮುನ್ನೆಚ್ಚರಿಕಾ ಕ್ರಮಗಳು:ಮಲಗುವ ಕೋಣೆಯನ್ನು ತಂಪಾಗಿಟ್ಟುಕೊಳ್ಳಿ. ರಾತ್ರಿ ವೇಳೆ ಕಾಫಿ, ಮದ್ಯ ಹಾಗೂ ಅತಿಯಾದ ಖಾರದ ಆಹಾರ ಸೇವನೆಯಿಂದ ದೂರವಿರಿ. ಯಾವುದೇ ಔಷಧಿ ತೆಗೆದುಕೊಂಡ ನಂತರ ಈ ತೊಂದರೆ ಕಂಡುಬಂದರೆ ಸ್ವಯಂಪ್ರೇರಿತವಾಗಿ ಮಾತ್ರೆ ನಿಲ್ಲಿಸದೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯ.
















































