‘ನಮ್ಮ ಮಹಿಳಾ ತಂಡ ಬಲಿಷ್ಠವಾಗಿದೆ’ ಭಾರತ ಎದುರು ಸೋತ ಬಳಿಕ ಪಾಕ್ ಕೋಚ್ ಹೇಳಿಕೆ

Picture of Savistara

Savistara

Bureau Report

ದುಬೈ: ಇಲ್ಲಿ ಮುಕ್ತಾಯಗೊಂಡ 2026ರ ಮಹಿಳಾ ಏಷ್ಯಾ ಕಪ್‌ನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಹೀನಾಯ ಪ್ರದರ್ಶನ ತೋರುವ ಮೂಲಕ ಸೋಲು ಅನುಭವಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಕಳಪೆ ಪ್ರದರ್ಶನ ನೀಡಿತು. ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ ಮಹಿಳಾ ತಂಡದ ಕೋಚ್ ವಹಾಬ್ ರಿಯಾಜ್, ‘ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ತಂಡ ಬಲಿಷ್ಠವಾಗಿದೆ’ ಎಂದಿದ್ದಾರೆ.ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ನಮ್ಮ ತಂಡದಲ್ಲಿರುವ ಎಲ್ಲಾ ಆಟಗಾರ್ತಿಯರು ಅತ್ಯುತ್ತಮ ಕೌಶಲ ಹೊಂದಿದ್ದಾರೆ. ಅವರ ಕೌಶಲದ ಮೇಲೆ ನಂಬಿಕೆ ಇಟ್ಟು ಆಡಬೇಕು. ಮುಂದಿನ ಪಂದ್ಯ ಹಾಂಗ್‌ಕಾಂಗ್ ವಿರುದ್ಧ ಇದೆ. ಭಾರತದ ತಂಡದ ವಿರುದ್ದ ಸೋಲಿಗೆ ಕಾರಣವೇನು ಎಂಬುದನ್ನು ಅವಲೋಕಿಸುತ್ತೇವೆ’ ಎಂದು ಹೇಳಿದ್ದಾರೆ.

‘ಪಾಕಿಸ್ತಾನ ಏಷ್ಯಾ ಕಪ್ ಟ್ರೋಫಿ ಗೆಲ್ಲವ ನೆಚ್ಚಿನ ತಂಡವಾಗಿದೆ. ಇಲ್ಲಿನ ಪಿಚ್ ನಮಗೆ ಅನುಕೂಲಕರವಾಗಿದೆ. ಭವಿಷ್ಯದ ದೃಷ್ಠಿಯಿಂದ ತಂಡದಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ಈ ಮೊದಲು ಇದ್ದ ಆಟಗಾರ್ತಿಯರು ಹಲವು ವಿಶ್ವಕಪ್, ಏಷ್ಯಾಕಪ್‌ಗಳನ್ನು ಆಡಿದ್ದಾರೆ. ಆದರೆ ಫಲಿತಾಂಶ ಸಿಕ್ಕಿರಲಿಲ್ಲ. ಹಾಗಾಗಿ ಮುಂಬರುವ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹೊಸಬರಿಗೆ ಅವಕಾಶ ನೀಡಿದ್ದೇವೆ’ ಎಂದಿದ್ದಾರೆ.

ಸೆಪ್ಟೆಂಬರ್ 7ರಂದು ಹಾಂಗ್‌ಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಸೋತರೆ, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಭಾರತ ತಂಡವು ಸತತ ಮೂರನೇ ಗೆಲುವಿನೊಡನೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡವು ಭಾರತದ ಬೌಲರ್‌ಗಳ ದಾಳಿಗೆ ನಲುಗಿ ಹೋಯಿತು. 18.1 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿತು.ಭಾರತದ ಪರ ಶ್ರೀಚರಣಿ (3/7), ಪ್ರೇಮಾ ರಾವತ್ (3/9) ಮತ್ತು ದೀಪ್ತಿ ಶರ್ಮಾ (2/5) ಮಾರಕ ಸ್ಪಿನ್ ದಾಳಿ ನಡೆಸಿ ಪಾಕ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. 56 ರನ್‌ಗಳ ಸುಲಭಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡವು 8.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದರು.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!