ದಸರಾ ಮುಗಿಯುತ್ತಿದ್ದಂತೆ ಮುನ್ನೆಲೆಗೆ ಬಂದ ಬಿಗ್ ಕಾಂಟ್ರವರ್ಸಿ: ಸರ್ಕಾರದ ಅಧಿಕೃತ ಜಾಹೀರಾತಿನಿಂದ ಮಂತ್ರಿಗಳ ಫೋಟೋ ಮಿಸ್ ಆಗಿದ್ದೇಕೆ?

Picture of Savistara

Savistara

Bureau Report

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಅತ್ಯಂತ ಅದ್ಧೂರಿಯಾಗಿ, ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆದರೆ, ಹಬ್ಬ ಮುಗಿದ ಬೆನ್ನಲ್ಲೇ ಮೈಸೂರು ರಾಜನಗರಿ ರಾಜಕೀಯ ಮತ್ತು ವಿವಾದಗಳ ಸರಮಾಲೆಗೆ ಸಾಕ್ಷಿಯಾಗುತ್ತಿದೆ. ದಸರಾ ಉತ್ಸವದ ಸಂಭ್ರಮದ ಬೆನ್ನಲ್ಲೇ ಈಗ ಸರ್ಕಾರದ ಅಧಿಕೃತ ಜಾಹೀರಾತಿನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವನ್ನೇ ಕೈಬಿಟ್ಟಿರುವುದು ಭಾರಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ.

​ಜಾಹೀರಾತು ವಿವಾದದ ಹಿನ್ನೆಲೆ:​ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಸರ್ಕಾರದ ಅಧಿಕೃತ ಶುಭಾಶಯಗಳ ಜಾಹೀರಾತಿನಲ್ಲಿ ಕೇವಲ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಫೋಟೋಗಳನ್ನು ಮಾತ್ರ ಮುದ್ರಿಸಲಾಗಿದೆ. ಆದರೆ, ಜಿಲ್ಲೆಯ ಉಸ್ತುವಾರಿ ಸಚಿವರ ಭಾವಚಿತ್ರವನ್ನು ಬೇಕಂತಲೇ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಮಾದದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜಾಹೀರಾತು ಬಿಡುಗಡೆ ಮಾಡಿದ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.​

‘ಸಿದ್ದರಾಮಯ್ಯರವರ ಸಿದ್ದಾಂತಗಳಿಗೆ ಈ ಗ್ರೂಪ್’ ಎಂಬ ಫೇಸ್‌ಬುಕ್ ಪುಟದಲ್ಲಿ ಈ ಜಾಹೀರಾತಿನ ತುಣುಕನ್ನು ಹಂಚಿಕೊಳ್ಳಲಾಗಿದ್ದು, ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.​

ಅಹಿಂದ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಆಕ್ರೋಶ:​ಜಿಲ್ಲಾ ಉಸ್ತುವಾರಿ ಸಚಿವರ ಫೋಟೋವನ್ನು ಹಾಕದೆ ನಿರ್ಲಕ್ಷ್ಯ ತೋರಿರುವ ವಾರ್ತಾ ಇಲಾಖೆ ಅಧಿಕಾರಿಗಳ ವಿರುದ್ಧ ಮೈಸೂರಿನಲ್ಲಿ ಅಹಿಂದ ಸಂಘಟನೆಗಳು ಮುಪಿಗೆಬಿದ್ದು ಪ್ರತಿಭಟನೆ ನಡೆಸಿವೆ. ಇದು ಕೇವಲ ಪ್ರಮಾದವಲ್ಲ, ಇದರ ಹಿಂದೆ ಯಾವುದಾದರೂ ದೊಡ್ಡ ರಾಜಕೀಯ ಷಡ್ಯಂತ್ರವಿರಬಹುದೇ ಎಂಬ ಶಂಕೆ ವ್ಯಕ್ತಪಡಿಸಿರುವ ಸಂಘಟನೆಗಳು, ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿವೆ.​

ಮತ್ತೊಂದೆಡೆ, ಅಕ್ಟೋಬರ್ 21ರಂದು ನಂದಿ ಧ್ವಜ ಪೂಜೆಗೆ ತೆರಳುತ್ತಿದ್ದ ಮೂವರು ಸವಾರರನ್ನು ಎಸ್ಪಿ ತಡೆದು ಅವಮಾನ ಮಾಡಿದ್ದಾರೆ ಎನ್ನುವ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದ್ದು, ದಸರಾ ಮುಗಿದ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲಿ ಸಾಲು ಸಾಲು ವಿವಾದಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!