ಬಿಗ್ ಬಾಸ್ ಸೀಸನ್ 12: ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಷನ್ ಶಾಕ್

Picture of Savistara

Savistara

Bureau Report

ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದ ಮೊದಲ ದಿನವೇ ಒಂದು ದೊಡ್ಡ ಟ್ವಿಸ್ಟ್‌ನೊಂದಿಗೆ ಆಕರ್ಷಕ ಘಟನೆಗೆ ಸಾಕ್ಷಿಯಾಯಿತು. ಮಂಗಳೂರು ಮೂಲದ ಸಾಮಾಜಿಕ ಜಾಲತಾಣದ ತಾರೆ ರಕ್ಷಿತಾ ಶೆಟ್ಟಿಯವರು ಮೊದಲ ದಿನವೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ, ಇದು ಎಲ್ಲರಿಗೂ ಆಘಾತಕಾರಿಯಾಗಿದೆ.

ಪುತ್ತೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಮೊದಲ ದಿನವೇ ಒಂದು ದೊಡ್ಡ ಟ್ವಿಸ್ಟ್‌ನೊಂದಿಗೆ ಆಕರ್ಷಕ ಘಟನೆಗೆ ಸಾಕ್ಷಿಯಾಯಿತು. ಮಂಗಳೂರು ಮೂಲದ ಸಾಮಾಜಿಕ ಜಾಲತಾಣದ ತಾರೆ ರಕ್ಷಿತಾ ಶೆಟ್ಟಿಯವರು ಮೊದಲ ದಿನವೇ ಬಿಗ್ ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ, ಇದು ಎಲ್ಲರಿಗೂ ಆಘಾತಕಾರಿಯಾಗಿದೆ.

ಜಂಟಿ ತಂಡದ ತೊಡಕು ಕಾರಣವಾಯಿತೇ?

ಈ ಸೀಸನ್‌ನಲ್ಲಿ ‘ಒಂಟಿ ವರ್ಸಸ್ ಜಂಟಿ’ ಎಂಬ ವಿನೂತನ ಥೀಮ್ ಇದ್ದು, ಪ್ರೇಕ್ಷಕರು ಯಾರು ಒಂಟಿಯಾಗಿ ಮತ್ತು ಯಾರು ಜೋಡಿಯಾಗಿ ಸ್ಪರ್ಧಿಸಬೇಕು ಎಂದು ಆಯ್ಕೆ ಮಾಡಿದ್ದಾರೆ. ಒಟ್ಟು 19 ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ. ಜಾಹ್ನವಿ, ಧ್ರುವಂತ್, ಮಲ್ಲಮ್ಮ, ಅಶ್ವಿನಿ ಗೌಡ ಮತ್ತು ಧನುಷ್ ಗೌಡ ಒಂಟಿ ತಂಡದಲ್ಲಿದ್ದಾರೆ. ಕರಿಬಸಪ್ಪ -ಅಮಿತ್ ಪವಾ‌ರ್, ರಾಶಿಕಾ ಶೆಟ್ಟಿ ಮಂಜು ಭಾಷಿಣಿ, ಸತೀಶ್ ಚಂದ್ರಪ್ರಭ, ಗಿಲ್ಲಿ ನಟ ಕಾವ್ಯ, ಅಶ್ವಿನಿ ಅಭಿಷೇಕ್ ಜಂಟಿ ತಂಡದಲ್ಲಿದ್ದಾರೆ. ಆದರೆ, ಸ್ಪಂದನಾ ಸೋಮಣ್ಣ. ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ ಜಂಟಿ ತಂಡದಲ್ಲಿದ್ದರೂ ಯಾವುದೇ ಜೋಡಿಯಾಗಿರಲಿಲ್ಲ.

ಮೂವರ ಮೇಲೆ ಗುರಿ!:

ಜೋಡಿಯಾಗದಿರುವ ಈ ಮೂವರಲ್ಲಿ ಒಬ್ಬರನ್ನು ಮನೆಯಿಂದ ಹೊರಗಟ್ಟಬೇಕೆಂದು ಬಿಗ್ ಬಾಸ್ ಆದೇಶಿಸಿದರು. ಈ ಮೂವರು ತಾವು ಮನೆಯಲ್ಲಿ ಉಳಿಯಬೇಕಾದ ಕಾರಣಗಳನ್ನು ವಿವರಿಸಿದರು. ಆದರೆ, ಮನೆಯ ಸದಸ್ಯರು ಸ್ಪಂದನಾ ಮತ್ತು ಮಾಳು ಅವರನ್ನು ಜೋಡಿಯಾಗಿಸಿ, ರಕ್ಷಿತಾ ಶೆಟ್ಟಿಯವರನ್ನು ಎಲಿಮಿನೇಷನ್‌ಗೆ ಆಯ್ಕೆ ಮಾಡಿದರು. “ರಕ್ಷಿತಾ ಇನ್ನೂ ಚಿಕ್ಕ ವಯಸ್ಸಿನವರು, ಮುಂದೆ ಅವಕಾಶಗಳು ಸಿಗಬಹುದು. ಸ್ಪಂದನಾ ಮತ್ತು ಮಾಳುಗೆ ಹೋಲಿಸಿದರೆ ರಕ್ಷಿತಾ ಅವರ ಕೊಡುಗೆ ಕಡಿಮೆ” ಎಂದು ಮನೆಯ ಸದಸ್ಯರು ತಮ್ಮ ತೀರ್ಮಾನವನ್ನು ತಿಳಿಸಿದರು.

ಮತ್ತೊಂದು ಟ್ವಿಸ್ಟ್‌ನ ನಿರೀಕ್ಷೆ?

ಮನೆಯ ಸದಸ್ಯರ ತೀರ್ಮಾನದಂತೆ ರಕ್ಷಿತಾ ಶೆಟ್ಟಿ ಮನೆಯಿಂದ ಹೊರನಡೆದರು. ಬಿಗ್ ಬಾಸ್ ಮನೆಯ ಬಾಗಿಲು ತೆರೆದು, ಅವರು ಹೊರಗೆ ಹೋದರು, ಇದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿತು. ಆದರೆ, ‘ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ವೆಡ್’ ಎಂಬ ಈ ಸೀಸನ್‌ ಘೋಷವಾಕ್ಯದಂತೆ, ರಕ್ಷಿತಾ ಶೆಟ್ಟಿಯವರು ಮತ್ತೆ ಮನೆಗೆ ಮರಳಬಹುದೇ ಎಂಬ ಊಹಾಪೋಹಗಳಿವೆ. ಕೆಲವು ಮೂಲಗಳ ಪ್ರಕಾರ, ರಕ್ಷಿತಾ ಪುನಃ ಬಿಗ್ ಬಾಸ್ ಮನೆಗೆ ಕಾಲಿಡಬಹುದು ಎಂದು ಹೇಳಲಾಗಿದೆ. ಇದಕ್ಕಾಗಿ ಮುಂದಿನ ಎಪಿಸೋಡ್‌ಗಳನ್ನು ಕಾದುನೋಡಬೇಕಾಗಿದೆ

[t4b-ticker]
error: Content is protected !!