ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026 ನವೆಂಬರ್ 12ರಂದು ಗ್ರಹಗಳ ಸೇನಾಧಿಪತಿಯಾದ ಮಂಗಳನು ಸಿಂಹ ರಾಶಿ ಪ್ರವೇಶಿಸಲಿದ್ದು, ಈಗಾಗಲೇ ಅಲ್ಲಿ ಸಂಚರಿಸುತ್ತಿರುವ ಕೇತು ಜೊತೆ ಸೇರಿ ಪ್ರಬಲ ‘ಕುಜ-ಕೇತು ಯೋಗ’ವನ್ನು (ಮಂಗಳ-ಕೇತು ಸಂಯೋಗ) ನಿರ್ಮಿಸಲಿದ್ದಾನೆ. ನವೆಂಬರ್ 25ರವರೆಗೆ ಇರಲಿರುವ ಈ ಅಪರೂಪದ ಸಂಯೋಗದಿಂದ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀಳಲಿದ್ದು, ಈ ಅವಧಿಯಲ್ಲಿ ಕೆಲವು ರಾಶಿಯವರು ಅತ್ಯಂತ ಎಚ್ಚರಿಕೆಯಿಂದಿರಬೇಕು.
ಯಾವ ರಾಶಿಗಳಿಗೆ ಹೆಚ್ಚು ಎಚ್ಚರಿಕೆ ಅಗತ್ಯ?
ಮೇಷ ರಾಶಿ: ಜಾತಕದ 5ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುವುದರಿಂದ ಭಾವನಾತ್ಮಕ ನಿರ್ಧಾರಗಳು ಹಾಗೂ ಪ್ರೇಮ ಸಂಬಂಧಗಳಲ್ಲಿ ಸಮಸ್ಯೆ ಎದುರಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು ಮತ್ತು ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ.
ಕರ್ಕ ರಾಶಿ: 2ನೇ ಮನೆಯಲ್ಲಿ ಸಂಯೋಗವಾಗುವುದರಿಂದ ಕೋಪದಿಂದ ಆಡುವ ಮಾತುಗಳು ಸಂಬಂಧಗಳಲ್ಲಿ ಬಿರುಕು ಮೂಡಿಸಬಹುದು. ಆರ್ಥಿಕ ವಿಚಾರಗಳಲ್ಲಿ ಬೇಜವಾಬ್ದಾರಿತನ ಬೇಡ ಮತ್ತು ಯಾರಿಗೂ ಸಾಲ ನೀಡಬೇಡಿ.
ಸಿಂಹ ರಾಶಿ: ನಿಮ್ಮದೇ ರಾಶಿಯಲ್ಲಿ ಈ ಯೋಗ ಮೂಡುವುದರಿಂದ ಕೋಪವನ್ನು ನಿಯಂತ್ರಿಸುವುದು ಅವಶ್ಯಕ. ಕಚೇರಿಯಲ್ಲಿ ಹಿರಿಯರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ ಹಾಗೂ ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
ಕನ್ಯಾ ರಾಶಿ: 12ನೇ ಮನೆಯಲ್ಲಿ ಸಂಯೋಗವಾಗುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ದೂರ ಪ್ರಯಾಣ ಅಥವಾ ವಿದೇಶಿ ಕೆಲಸದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.
ಮಕರ ರಾಶಿ: 8ನೇ ಮನೆಯಲ್ಲಿ ಈ ಪ್ರಭಾವವಿರುವುದರಿಂದ ಆರ್ಥಿಕ ಹಾಗೂ ಹೂಡಿಕೆ ವಿಚಾರಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿ. ಯಾವುದೇ ದೊಡ್ಡ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಪೂರ್ಣ ಮಾಹಿತಿ ಪಡೆಯಿರಿ.












































