CINEMA​ಬಾಕ್ಸ್‌ ಆಫೀಸ್‌ನಲ್ಲಿ ತಲೈವಾ ಸುನಾಮಿ: ಕೇವಲ 6 ದಿನಗಳಲ್ಲಿ 541 ಕೋಟಿ ರೂ. ಬಾಚಿಕೊಂಡ ‘ಜೈಲರ್ 2’!

Picture of Savistara

Savistara

Bureau Report

​

​ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಜೈಲರ್‌ 2’ ಚಿತ್ರವು ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಅಕ್ಟೋಬರ್ 15ರಂದು ಅದ್ಧೂರಿಯಾಗಿ ಬಿಡುಗಡೆಯಾದ ಈ ಸಿನಿಮಾ, ಕೇವಲ ಆರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 541 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಕಲೆಕ್ಷನ್ ಹಾಗೂ ಚಿತ್ರದ ಪ್ರಮುಖ ಮುಖ್ಯಾಂಶಗಳು:
​ವಿಶ್ವದಾದ್ಯಂತ ಭರ್ಜರಿ ಕಮಾಯಿ: ಕೇವಲ 6 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹337 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹204 ಕೋಟಿಗೂ ಅಧಿಕ ಗ್ರಾಸ್ ಗಳಿಕೆ ಸೇರಿ ಒಟ್ಟು ₹541 ಕೋಟಿ ಬಾಚಿಕೊಂಡಿದೆ.
​

ದೊಡ್ಡ ಬಜೆಟ್ ಸಿನಿಮಾಗಳ ದಾಖಲೆ ಉಡೀಸ್: ದಳಪತಿ ವಿಜಯ್ ಅವರ ‘ಜನ ನಾಯಗನ್’, ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ಭಾರತದ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ‘ಜೈಲರ್ 2’ ಕೇವಲ 6 ದಿನಗಳಲ್ಲಿ ಮುರಿದು ಮುನ್ನುಗ್ಗುತ್ತಿದೆ.
​

ತಾರಾಗಣ ಮತ್ತು ತಂತ್ರಜ್ಞಾನ: ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಶಿವರಾಜ್‌ಕುಮಾರ್, ಮೋಹನ್‌ಲಾಲ್, ವಿದ್ಯಾ ಬಾಲನ್ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!