ಉಡುಪಿ : ನಕಲಿ ವೆಬ್‌ಸೈಟ್ ವಂಚನೆ! ರಾಜಸ್ಥಾನದಲ್ಲಿ ಆರೋಪಿ ಬ೦ಧನ!

Picture of Savistara

Savistara

Bureau Report

ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಂತೆ ನಕಲಿ ವೆಬ್‌ಸೈಟ್ ಸೃಜಿಸಿ ಭಕ್ತರಿಂದ ರೂಮ್ ಬುಕ್ಕಿಂಗ್ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಪ್ರಕರಣದಲ್ಲಿ ಕೊಲ್ಲೂರು ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ.ನ.3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2025 ಅಡಿ ಪ್ರಕರಣ ದಾಖಲಾಗಿತ್ತು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತಂಡವು ರಾಜಸ್ಥಾನ ರಾಜ್ಯದ ತಿಜಾರಾ ಜಿಲ್ಲೆಯಲ್ಲಿರುವ ಆರೋಪಿ ನಾಸೀರ್ ಹುಸೇನ್ (21)ನನ್ನು ಡಿ.19ರಂದು ಬಂಧಿಸಿದೆ.ಆರೋಪಿಯಿಂದ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಡಿ.19ರಂದು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

[t4b-ticker]
error: Content is protected !!