ಪಂಜ: ಯುವಕ-ಯುವತಿ ಮಂಡಲಗಳ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Picture of Savistara

Savistara

Bureau Report

ಜನವರಿ 17ಕ್ಕೆ ಹಗ್ಗ ಜಗ್ಗಾಟ, ಜನವರಿ 24ಕ್ಕೆ ಬೆಳ್ಳಿಹಬ್ಬ ಕಾರ್ಯಕ್ರಮ

ನೂತನ ಶ್ರೀ ಉಳ್ಳಾಕುಲು ಸಭಾ ಭವನ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ

Advertisement

ಪಂಜ: ಪಂಜದ ಜೈ ಕರ್ನಾಟಕ ಯುವಕ ಮಂಡಲ (ರಿ) ಐವತ್ತೋಕ್ಲು ಪಂಜ ಮತ್ತು ಕೃಪಾ ಯುವತಿ ಮಂಡಲ (ರಿ) ಐವತ್ತೋಕ್ಲು ಪಂಜ ಇದರ ಬೆಳ್ಳಿಹಬ್ಬ ಸಂಭ್ರಮ ಜನವರಿ 24 ರಂದು ವಿಜೃಂಭಣೆಯಿಂದ ನಡೆಯಲಿದೆ.

Advertisement

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನವೆಂಬರ್ 26 ರಂದು ಅಲ್ಪೆ ಚಿಂಗಾಣಿಗುಡ್ಡೆ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಡೆಯಿತು.

Advertisement

ಉದ್ಯಮಿ ಆನಂದ್ ರಾಜ್ ದೇವರಗದ್ದೆ ಸುಬ್ರಹ್ಮಣ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

Advertisement

ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಹಾಗೂ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ದಯಾನಂದ ಮೇಲ್ಮನೆ ಇವರು ಅಧ್ಯಕ್ಷತೆ ವಹಿಸಿದರು.

Advertisement

ವೇದಿಕೆಯಲ್ಲಿ ಯುವಕ ಮಂಡಲ ಅಧ್ಯಕ್ಷ ಶರತ್ ಕೋಡಿ, ಯುವತಿ ಮಂಡಲದ ಅಧ್ಯಕ್ಷೆ ಸತ್ಯವತಿ ಶೇಡಿಗುಂಡಿ, ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷೆ ದಿವ್ಯಜ್ಯೋತಿ ಕೆಬ್ಲಾಡಿ, ಬೆಳ್ಳಿಹಬ್ಬ ಸಮಿತಿಯ ವಿವಿಧ ಸಂಚಾಲಕರು, ಸದಸ್ಯರುಗಳು, ಯುವಕ-ಯುವತಿ ಮಂಡಲಗಳ ಪೂರ್ವಾಧ್ಯಕ್ಷರುಗಳು ಮತ್ತು ಸರ್ವ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಕಟ್ಟಡ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ್ ತೋಟ ಸ್ವಾಗತಿಸಿ, ಬೆಳ್ಳಿಹಬ್ಬದ ಕಾರ್ಯದರ್ಶಿ ರತನ್ ಶೇಡಿಗುಂಡಿ ಧನ್ಯವಾದ ಗೈದರು. ಯುವಕ ಮಂಡಲದ ಪೂರ್ವಾಧ್ಯಕ್ಷ ಪ್ರಕಾಶ್ ಅಲ್ಪೆ ಕಾರ್ಯಕ್ರಮ ನಿರೂಪಿಸಿದರು.

Advertisement

ಜನವರಿ 17 ರಂದು ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ಜನವರಿ 24 ರಂದು ಬೆಳ್ಳಿಹಬ್ಬ ಕಾರ್ಯಕ್ರಮದೊಂದಿಗೆ ನೂತನ ಶ್ರೀ ಉಳ್ಳಾಕುಲು ಸಭಾ ಭವನ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

[t4b-ticker]
error: Content is protected !!