ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ।ಮಲಯಾಳ ನಟ ದಿಲೀಪ್ ಖುಲಾಸೆಗೊಳಿಸಿದ ಕೋರ್ಟ್

Picture of Savistara

Savistara

Bureau Report

ಕೊಚ್ಚಿ: ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಕೇರಳ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿಯಾಗಿದ್ದ ಸುನೀಲ್ ಎನ್.ಎಸ್ ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಜನರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.ನಟ ದಿಲೀಪ್‌ ಅವರನ್ನು ಹೊರತುಪಡಿಸಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ ಮೂವರನ್ನು ಕೂಡ ನಿರಾಪರಾಧಿಗಳು ಎಂದು ಹೈಕೋರ್ಟ್‌ನ ನ್ಯಾ. ಹನಿ ಎಂ ವರ್ಗೀಸ್ ಅವರು ತೀರ್ಪು ನೀಡಿದ್ದಾರೆ.2017ರಲ್ಲಿ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರ ಕಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ದೂರು ನೀಡಲಾಗಿತ್ತು.ನಟ ದಿಲೀಪ್‌ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು

ನಟ ದಿಲೀಪ್‌ ಅವರು ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!