ತಿರುಮಲ: ತಿಮ್ಮಪ್ಪನಿಗೆ 121 ಕೆಜಿ ಚಿನ್ನ ಸಮರ್ಪಿಸಿದ ಉದ್ಯಮಿ ವರ್ಧಮಾನ್ ಜೈನ್ ದಂಪತಿ

Picture of Savistara

Savistara

Bureau Report

ತಿರುಮಲ, ನ.26: ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಹಾಗೂ ಅವರ ಪತ್ನಿ ರಾಧಿಕಾ ಜೈನ್ ದಂಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

Advertisement

ಇದರ ಒಟ್ಟು ಮೌಲ್ಯ ₹207.60 ಕೋಟಿ ಎಂದು ಟಿಟಿಡಿ ತಿಳಿಸಿದೆ.ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಈ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.

Advertisement

Advertisement

ಚಿನ್ನದ ಕಿರೀಟ, ಲಕ್ಷ್ಮೀಹಾರ, ಸಾಲಿಗ್ರಾಮ ಹಾರ, ಕಂಕಣ, ಶಂಖ-ಚಕ್ರ ಕವಚ ಸೇರಿದಂತೆ ಒಟ್ಟು 46 ಆಭರಣಗಳನ್ನು ನೀಡಲಾಗಿದೆ. ಇದರಲ್ಲಿ ವೆಂಕಟೇಶ್ವರ ಸ್ವಾಮಿಗೆ 106 ಕೆಜಿ, ತಿರುಚಾನೂರಿನ ಪದ್ಮಾವತಿ ದೇವಿಗೆ 15 ಕೆಜಿ ಚಿನ್ನ ಬಳಕೆಯಾಗಿದೆ.

Advertisement

Advertisement

ಆಭರಣಗಳಲ್ಲಿ 238.2 ಕ್ಯಾರೆಟ್ ವಜ್ರ, 2,247.7 ಕ್ಯಾರೆಟ್ ಅಮೂಲ್ಯ ರತ್ನಗಳು ಅಳವಡಿಸಲಾಗಿವೆ.ದಾನಿಗಳ ಕುಟುಂಬದವರು ಆಭರಣಗಳಿದ್ದ ತಟ್ಟೆಗಳನ್ನು ತಲೆಯ ಮೇಲೆ ಹೊತ್ತು ಧ್ವಜಸ್ತಂಭಕ್ಕೆ ಪ್ರದಕ್ಷಿಣೆ ಹಾಕಿ ಗರ್ಭಗುಡಿಯಲ್ಲಿ ಸ್ವಾಮಿಗೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

Advertisement

Advertisement

ವರ್ಧಮಾನ್ ಜೈನ್ ಅವರು ಆಕ್ಸೆಸ್ ಹೆಲ್ತ್‌ಕೇರ್ ಸಂಸ್ಥೆಯ ಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿದ್ದಾರೆ.

[t4b-ticker]
error: Content is protected !!