ಕಾರವಾರ: ಸಂವಿಧಾನ ಗೌರವ ದಿವಸದ ಅಂಗವಾಗಿ ಕಾರವಾರದ ಬಿಜೆಪಿ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
Advertisement

ಅಸ್ಪೃಶ್ಯತೆ ನಿವಾರಣೆ, ಎಲ್ಲರಿಗೂ ಸಮಾನತೆ ನೀಡಲು ಸಂವಿಧಾನ ರಚನೆಗೆ ಡಾ. ಅಂಬೇಡ್ಕರ್ ಮಾಡಿದ ಹೋರಾಟವನ್ನು ಸ್ಮರಿಸಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡೋಣ ಎಂದು ಹೇಳಲಾಯಿತು.
Advertisement


ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ್ ವಿನಾಯಕ ಲಾಂಜೆಕರ್ ಹಾಗೂ ಪ್ರಾಧ್ಯಾಪಕ ವಿನಾಯಕ ಅವರಿಗೆ ಸಂವಿಧಾನ ಪುಸ್ತಕ ನೀಡಿ ಗೌರವಿಸಲಾಯಿತು.
Advertisement

Advertisement

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ್,ಅಶೋಕ್ ಛಲವಾದಿ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಗರ ಅಧ್ಯಕ್ಷ ನಾಗೇಶ್ ಕುರುಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್, ಕೆ.ಜಿ. ನಾಯ್ಕ್, ಸಂಜಯ ಸಾಲುಕೆ, ರಾಜು ಭಂಡಾರಿ, ನಂದನ್ ಬೋರ್ಕರ್ ಸೇರಿದಂತೆ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
Advertisement










































