ಕೊಲ್ಲೂರು ದೇಗುಲದ ನಕಲಿ ವೆಬ್ಸೈಟ್ ಸೃಷ್ಟಿಸಿದ ರಾಜಸ್ಥಾನದ ನಾಸೀರ್ ಹುಸೇನ್ | ಭಕ್ತರಿಗೆ ಲಕ್ಷಾಂತರ ವಂಚನೆ! ​

Picture of Savistara

Savistara

Bureau Report

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಜಿಸಿ, ರೂಮ್ ಬುಕಿಂಗ್ ಹೆಸರಲ್ಲಿ ಭಕ್ತರಿಗೆ ಟೋಪಿ ಹಾಕುತ್ತಿದ್ದ ರಾಜಸ್ಥಾನದ ಯುವಕ ಈಗ ಪೊಲೀಸ್ ಅತಿಥಿ! ​

ಏನಿದು ಪ್ರಕರಣ?​ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ಸೈಟ್ ಸೃಷ್ಟಿ.​ಭಕ್ತರಿಂದ ಆನ್ಲೈನ್ ನಲ್ಲಿ ಮುಂಗಡ ಹಣ ಪಡೆದು ನಕಲಿ ರಶೀದಿ ನೀಡುತ್ತಿದ್ದ ಆರೋಪಿ.​ದೇವಸ್ಥಾನದ ಇ.ಒ ನೀಡಿದ ದೂರಿನ ಮೇರೆಗೆ ತನಿಖೆ ಆರಂಭ.​

ಪೊಲೀಸ್ ಕಾರ್ಯಾಚರಣೆ:

ಬೈಂದೂರು ಮತ್ತು ಕುಂದಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ನಾಸೀರ್ ಹುಸೇನ್ (21) ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಆತನಿಂದ ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಆರೋಪಿ ಜೈಲು ಪಾಲಾಗಿದ್ದಾನೆ.

#ವಿಶೇಷ_ಸೂಚನೆ : ದೇವಸ್ಥಾನದ ರೂಮ್ ಬುಕಿಂಗ್ ಅಥವಾ ಸೇವೆಗಳಿಗಾಗಿ ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. ಹಣ ಪಾವತಿಸುವ ಮುನ್ನ ಎಚ್ಚರವಹಿಸಿ.​

[t4b-ticker]
error: Content is protected !!