ಸುಳ್ಯ:ಸೇವಾ ಭಾರತಿ ಹೆಲ್ಫ್ ಲೈನ್ ಟ್ರಸ್ಟ್,ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಮತ್ತು ರೋಟರಿ ಸುಳ್ಯ ಸಿಟಿ, ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಬಾಲ ಸಂಗಮ ಕಾರ್ಯಕ್ರಮ ರೋಟರಿ ಆಂಗ್ಲ ಮಾಧ್ಯಮ ಶಾಲೆ ರಥಬೀದಿ ಸುಳ್ಯದಲ್ಲಿ ಇಂದು ನಡೆಯಿತು.

ಮಕ್ಕಳಿಗೆ ಜನಪದ ಹಾಡು, ಕಬೀರ ದೋಹಾ, ಕುಣಿತ ಭಜನೆ, ಅಭಿನಯ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್ ಕಾರ್ಯಕ್ರಮ ಉದ್ಘಾಟಸಿದರು. ಪ್ರಮುಖರಾದ ನ. ಸೀತಾರಾಮ್, ಮನೋಜ್ ಅಡ್ಡಂತಡ್ಕ ಹಾಗೂ ಸೇವಾ ಭಾರತಿ, ರೋಟರಿ ಕ್ಲಬ್, ನಿವೇದಿತಾ ಟ್ರಸ್ಟ್, ಇನ್ನರ್ ವೀಲ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಸುದರ್ಶನ್, ರಾಜೇಶ್ ಶೆಟ್ಟಿ ಮೇನಾಳ ಸಹಕರಿಸಿದರು.













































