ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ

Picture of Savistara

Savistara

Bureau Report

ದೇಶದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಹುಟ್ಟುಹಬ್ಬಕ್ಕೆ, ಲಲಿತ್ ಮೋದಿ ಅವರು ಲಂಡನ್‌ನ ಬೆಲ್‌ಗ್ರೇವ್ ಸ್ಟೇರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ವಹಿಸಿದ್ದಾರೆ.

ನಟಿ ಇದ್ರಿಸ್ ಎಲ್ಲಾ ಹಾಗೂ ವಸ್ತ್ರ ವಿನ್ಯಾಸಕಿ ಮನೊವಿರಾಜ್ ಖೋಸ್ಲಾ ಸೇರಿದಂತೆ ಅನೇಕರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾ‌ರ್ ಶಾ ಅವರೂ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.ಈ ಸಂದರ್ಭದ ಚಿತ್ರಗಳನ್ನೊಗೊಂಡ ವಿಡಿಯೊವನ್ನು ಮೋದಿ ಅವರು ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಗುರುವಾರ ಹಂಚಿಕೊಂಡಿದ್ದಾರೆ.’ಆತ್ಮೀಯ ಗೆಳೆಯ ವಿಜಯ್ ಮಲ್ಯ ಹಾಗೂ ವಿಶ್ವದ ಮೂಲೆಮೂಲೆಗಳಿಂದ ಬಂದ ಅವರ ಸ್ನೇಹಿತರು, ಕುಟುಂಬದವರಿಗಾಗಿ ನನ್ನ ಮನೆಯಲ್ಲಿ ನಿನ್ನೆ ರಾತ್ರಿ ಅದ್ಭುತ ಸಂಭ್ರಮಾಚರಣೆ ನಡೆಯಿತು. 70ನೇ ವರ್ಷದ ಜನ್ಮದಿನಕ್ಕೆ ಕಾಲಿಟ್ಟ ಮಲ್ಯಗೆ ಸಂತೋಷ, ಯಶಸ್ಸು ಸಿಗಲೆಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಮೋದಿ ಮತ್ತು ಮಲ್ಯ ಅವರ ಚಿತ್ರ ಹಂಚಿಕೊಂಡಿರುವ ಅಂತರರಾಷ್ಟ್ರೀಯ ಛಾಯಾಗ್ರಾಹಕ ಜಿಮ್ ರೈಡೆಲ್‌, ಲಂಡನ್‌ನಲ್ಲಿ ಮಲ್ಯ ಅವರ ಜನ್ಮ ದಿನದ ಸಂಭ್ರಮಕ್ಕೆ ಆತಿಥ್ಯ ವಹಿಸಿದ್ದಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ್ದಾರೆ.ರೈಡೆಲ್ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಮೋದಿ, ನನ್ನ ಸ್ನೇಹಿತನ ಹುಟ್ಟುಹಬ್ಬದ ಪೂರ್ವಭಾವಿ ಕಾರ್ಯಕ್ರಮಕ್ಕೆ ಬಂದದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ.

[t4b-ticker]
error: Content is protected !!