ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ;

Picture of Savistara

Savistara

Bureau Report

ಶ್ರೀಹರಿಕೋಟಾ:ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್ ಪ್ಯಾಡ್‌ನಿಂದ, 51.7 ಮೀಟರ್ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ.

ಇದನ್ನು’ಜಿಎಸ್‌ಎಲ್‌ವಿ-ಎಫ್17/ಇಒಎಸ್-05 ಮಿಷನ್’ ಎಂದು ಹೆಸರಿಸಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಐತಿಹಾಸಿಕ ಸಾಧನೆ ಇದಾಗಿದ್ದು ಭೂಸ್ಥಿರ ಕಕ್ಷೆಯಿಂದ ಚಿತ್ರಗಳನ್ನು ಸೆರೆಹಿಡಿಯುವ ಈ ಇಒಎಸ್-05 ಮಿಷನ್ ಅತ್ಯಾಧುನಿಕ ತಂತ್ರಜ್ಞಾನದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ಚಿತ್ರಣಗಳನ್ನು ಸೆರೆಹಿಡಿಯಲಿರುವ ಭಾರತದ ಪ್ರಥಮ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಗದಿತ ಸಮಯಕ್ಕೆ ಯಶಸ್ವಿಯಾಗಿ ರಾಕೆಟ್ ಆಕಾಶಕ್ಕೆ ಚಿಮ್ಮಿತು. ಜಿಎಸ್‌ಎಲ್‌ವಿ ರಾಕೆಟ್ ಮೂಲಕ ನಡೆಸಲಾಗುತ್ತಿರುವ 19ನೇ ಉಡಾವಣೆ ಇದಾಗಿದೆ.

[t4b-ticker]
error: Content is protected !!