ಸೌತಡ್ಕ :ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿನ ಅಂಗಡಿ ವಿಚಾರದಲ್ಲಿ ಗಲಾಟೆ, ಹಲ್ಲೆ |ಪ್ರತ್ಯೇಕ ಪ್ರಕರಣಗಳು ದಾಖಲು

Picture of Savistara

Savistara

Bureau Report

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿನ ಅಂಗಡಿಯಲ್ಲಿ ನಡೆದ ಗಲಾಟೆ, ಹಲ್ಲೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕೊಕ್ಕಡ ನಿವಾಸಿ ಕೃಷ್ಣ ಭಟ್ ನೀಡಿದ ದೂರಿನ ಪ್ರಕಾರ, ಅ. 18ರಂದು ಬೆಳಗ್ಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸೇವಾ ಟ್ರಸ್ಟ್‌ಗೆ ಸೇರಿದ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರು ವ್ಯಾಪಾರ ಮಾಡುತ್ತಿದ್ದಾಗ, ಈ ಹಿಂದೆ ಅಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್, ಅವರ ಪತ್ನಿ, ಮಕ್ಕಳು ಹಾಗೂ ಇತರರು ಅಂಗಡಿಗೆ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಟ್ಟಡ ಹಾಗೂ ಸೊತ್ತುಗಳಿಗೆ ಸುಮಾರು 25,000 ರೂ. ನಷ್ಟು ಹಾನಿ ಆಗಿದೆ. ತಂಡ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಹರಿಶ್ಚಂದ್ರ ಅವರ ಪತ್ನಿ ನೀಡಿದ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!