ಮುಂಬಯಿ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ಪೊಲೀಸರು ಮೂವರು ಶಂಕಿತ ಶೂಟರ್‌ಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.ರಾಜಸ್ಥಾನದ ಕೋಟಾದಲ್ಲಿ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.ಫುಲ್ ಸಿಂಗ್, ಹೃತಿಕ್ ಕುಮಾರ್, ರೆಹಾನ್ ಎನ್ನುವವರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಇಬ್ಬರು ಹರಿಯಾಣದ ಸೋನಿಪತ್ ಮೂಲದವರಾಗಿದ್ದಾರೆ. ಒಬ್ಬಾತ ಬಿಹಾರದ ಬೇಗುಸರಾಯ್ ಮೂಲದವನು ಎಂದು ತಿಳಿದು ಬಂದಿದೆ.
ಏನಿದು ಘಟನೆ?:ಭಾನುವಾರ (ಅ.18) ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್ ಬಾಲ್ ಆಡಿ ವಾಪಾಸ್ ಆಗುತ್ತಿದ್ದ ವೇಳೆ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದರು.
ಈ ಘಟನೆಯಲ್ಲಿ ನಟ ಸೇರಿ ಮೂವರಿಗೆ ಗಾಯವಾಗಿದೆ. ಕೃತ್ಯದ ಹೊಣೆಯನ್ನು ಬಿಟ್ಟೋಯ್ ಗ್ಯಾಂಗ್ ಹೊತ್ತಿಕೊಂಡಿದೆ.
ಬೆದರಿಕೆ ಸಂದೇಶ..ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್‌ನ ಸಹಚರ ಎಂದು ಹೇಳಿಕೊಂಡಿರುವ ವ್ಯಕ್ತಿಯ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಈ ಗುಂಪು, ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಳ್ಳುವವರಿಗೂ ಇದೇ ಗತಿ ಎಂದು ಎಚ್ಚರಿಕೆ ನೀಡಿದ್ದಾನೆ.ಬೆದರಿಕೆ ಹಾಕಿರುವ ವ್ಯಕ್ತಿ ತನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡಿದ್ದು, ವೈರಲ್ ಆಗಿರುವ ಆಡಿಯೋದಲ್ಲಿ, “ಚಿತ್ರರಂಗದಲ್ಲಿ ನಮ್ಮ ಮಾತನ್ನು ಮೀರಿ ಸಲ್ಮಾನ್ ಖಾನ್ ಜೊತೆ ಸೇರಿ ಕೆಲಸ ಮಾಡುವವರನ್ನು ಮುಗಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದು ಅಲ್ಲದೆ ಆಡಿಯೋದ ಕೊನೆಯಲ್ಲಿ “ಸಬಾ ನಂಬರ್ ಆಯೇಗಾ” (ಎಲ್ಲರ ಸರದಿ ಬರುತ್ತದೆ) ಎಂಬ ಬೆದರಿಕೆ ಸಂದೇಶವಿದೆ.










































