ಇರಾನ್‌ ದಾಳಿಯ ನಡುವೆಯೂ ಹೊರ್ಮುಜ್ ಜಲಸಂಧಿ ಶೇ. 97ರಷ್ಟು ಮುಕ್ತ: ಅಮೆರಿಕ ಮಿಲಿಟರಿ

Picture of Savistara

Savistara

Bureau Report

ವಾಷಿಂಗ್ಟನ್: ವಾಣಿಜ್ಯ ನೌಕೆಗಳ ಮೇಲೆ ಇರಾನ್ ದಾಳಿ ನಡೆಸುತ್ತಿದ್ದರೂ ಸಹ, ಹೊರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಶೇ. 97 ರಷ್ಟು ನೌಕೆಗಳು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ದಾಟಿವೆ ಮತ್ತು ಈ ಆಯಕಟ್ಟಿನ ಜಲಸಾರಿಗೆ ಮಾರ್ಗವು ಮುಕ್ತವಾಗಿದೆ ಎಂದು ಅಮೆರಿಕ ಮಿಲಿಟರಿ ಪ್ರತಿಪಾದಿಸಿದೆ.ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ನೌಕಾಪಡೆಯ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇತ್ತೀಚೆಗೆ ಸರಕು ನೌಕೆಯೊಂದು ಈ ಪ್ರದೇಶದಲ್ಲಿ ಮುಳುಗಿದ್ದರೂ, ಅಮೆರಿಕ ನೌಕಾಪಡೆಯ ಸಮನ್ವಯದ ರಕ್ಷಣಾ ಕ್ರಮಗಳಿಂದಾಗಿ ಸಾವಿರಾರು ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಸೈಪ್ರಸ್ ಮೂಲದ ಸಂಸ್ಥೆಗೆ ಸೇರಿದ ಮತ್ತು ಸಿಂಗಾಪುರ ಧ್ವಜ ಹೊಂದಿದ್ದ ‘ಜಿಎಫ್‌ಎಸ್‌ ಪ್ರೈಡ್’ (GFS Pride) ಎಂಬ ಕಂಟೈನ‌ರ್ ನೌಕೆಗೆ ಬುಧವಾರ ಇರಾನ್‌ನಿಂದ ದಾಳಿಯಾಗಿ ಬೆಂಕಿ ಹೊತ್ತಿಕೊಂಡಿತ್ತು, ನಂತರ ಅದನ್ನು ದಂಡೆಗೆ ಎಳೆದುಕೊಂಡು ಹೋಗುವಾಗ ಅದು ಮುಳುಗಿತ್ತು.

ಈ ಘಟನೆಯ ಹೊರತಾಗಿಯೂ, ಇರಾನ್ ವಾಣಿಜ್ಯ ನೌಕೆಗಳ ಮೇಲೆ ನಡೆಸಿದ ಬಹುತೇಕ ದಾಳಿಗಳು ವಿಫಲವಾಗಿವೆ ಎಂದು ಹಾಕಿನ್ಸ್ ಹೇಳಿದ್ದಾರೆ.ಅಂತಾರಾಷ್ಟ್ರೀಯ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲಿನ ಇರಾನ್‌ನ ಯತ್ನಗಳಲ್ಲಿ ಶೇ. 97 ರಷ್ಟು ವಿಫಲವಾಗಿದ್ದು, ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಸಂಚಾರ ಇಂದಿಗೂ ಸಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.ಇನ್ನೊಂದೆಡೆ, ಅಮೆರಿಕವು ಸಮುದ್ರ ಮಾರ್ಗದ ವ್ಯಾಪಾರವನ್ನು ನಿರ್ಬಂಧಿಸಿರುವುದರಿಂದ ಇರಾನ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತನ್ನ ಬೆಂಬಲಿತ ಸಶಸ್ತ್ರ ಗುಂಪುಗಳಿಗೆ ಹಣಕಾಸು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಯುಎಸ್ ಅಡ್ಮಿಖಲ್‌ ಬ್ಲ್ಯಾಡ್ ಕೂಪ‌ರ್ ತಿಳಿಸಿದ್ದಾರೆ. ಸಮುದ್ರದ ಮೂಲಕ ಇರಾನ್‌ಗೆ ಯಾವುದೇ ಆಮದು ಅಥವಾ ರಫ್ತು ನಡೆಯುತ್ತಿಲ್ಲ, ಇದು ಇರಾನ್‌ ಭದ್ರತಾ ಪಡೆ ಮತ್ತು ಐಆರ್‌ಜಿಸಿ (IRGC) ಮೇಲೆ ತೀವ್ರ ಆರ್ಥಿಕ ಪೆಟ್ಟು ನೀಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!